

ಚಿಂಚೋಳಿ: ಪಟ್ಟಣದ ಚಂದಾಪೂರದ ಭವಾನಿ ನಗರ ಬಡಾವಣೆಯಲ್ಲಿ ಭಾನುವಾರ ಸುರಿದ ಮಳೆಗೆ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ರಾಮು ಅವರ ಮನೆಗೆ ನೀರು ನುಗ್ಗಿದ್ದು, ದವಸ ಧಾನ್ಯಗಳು ಹಾಳಾಗಿವೆ. ಶನಿವಾರ ಸಾಯಂಕಾಲ ಪ್ರಾರಂಭವಾದ ಮಳೆ ಭಾನುವಾರವು ಮುಂದುವರೆದಿದ್ದು, ಚರಂಡಿ ಸ್ವಚ್ಛತೆ ಇಲ್ಲದೆ ಇರುವುದರಿಂದ ಮಳೆ ನೀರಿನ ಜೊತೆ ಕೊಳಚೆ ನೀರು ಮನೆಗೆ ನುಗ್ಗಿದೆ.
ಇದರಿಂದ ದವಸ ಧಾನ್ಯಗಳು ಹಾಳಾಗಿವೆ. ಕೂಡಲೇ ಚರಂಡಿಗಳ ಸ್ವಚ್ಛತೆಗೆ ಮುಂದಾಗಬೇಕು. ಮಳೆ ಹಾಗೂ ಚರಂಡಿ ನೀರಿನಿಂದ ಹಾಳಾದ ಕುಟುಂಬಕ್ಕೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು ಸ್ಥಳೀಯರು ಒತ್ತಾಯಿಸಿದ್ದಾರೆ.