

ಚಿಂಚೋಳಿ: ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಶುಕ್ರವಾರದಿಂದ ಅ.30ರವರೆಗೆ ಸಂಭ್ರಮದಿAದ ಕಲ್ಯಾಣ ಪರ್ವ ನಡೆಯಲಿದ್ದು, ಅಸಂಖ್ಯಾತ ಶರಣ ಭಕ್ತರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಹಿರಿಯ ನ್ಯಾಯವಾದಿ ನಂದಿಕುಮಾರ ಪಾಟೀಲ್ ಹೇಳಿದರು.
ಬಸವೇಶ್ವರ ವೃತ್ತದ ಬಳಿ ರಾಷ್ಟಿçÃಯ ಬಸವ ದಳ, ವಿರಶೈವ ಲಿಂಗಾಯತ ಮಹಾವೇದಿಕೆಯಿಂದ ಶನಿವಾರ ಹಮ್ಮಿಕೊಂಡಿದ್ದ ಬಸವ ಜ್ಯೋತಿ ಶೋಭಾಯಾತ್ರೆಯಲ್ಲಿ ಮಾತನಾಡಿ, ಮಹಾ ಮಾನವತವಾದಿ, ವಿಶ್ವಗುರು ಬಸವಣ್ಣನವರ ವಿಚಾರಧಾರೆಗಳನ್ನು ಉಣಬಡಿಸುವ ನಿಟ್ಟಿನಲ್ಲಿ ಪರ್ವ ಆಯೋಜಿಸಲಾಗಿದೆ. ಸಾಮೂಹಿಕ ಇಷ್ಟಲಿಂಗ ಪೂಜೆ, ಪ್ರಾರ್ಥನೆ, ಪಥ ಸಂಚಲನ, ಬಸವಧರ್ಮ ವಿಜಯೋತ್ಸವ ಸೇರಿ ಹಲವು ಕಾರ್ಯಕ್ರಮಗಳು ಜರುಗಲಿವೆ. ಸಮಾಜ ಬಾಂಧವರು, ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕೋರಿದರು.
ನಿವೃತ್ತ ಪಶು ಆರೋಗ್ಯ ಅಧಿಕಾರಿ ಡಾ. ವಿಜಯಕುಮಾರ ಬೇಳಕೇರಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುರೇಶ ದೇಶಪಾಂಡೆ, ಪ್ರಮುಖರಾದ ಸೂರ್ಯಕಾಂತ ಹುಲಿ, ಶಂಭುಲಿAಗ ಶಿವಪುರಿ, ಶ್ರೀಕಾಂತ ಪೋಲಕಪಳ್ಳಿ, ಚಂದ್ರಕಾAತ ಕೇರಳ್ಳಿ, ರೇವಣಸಿದ್ದಪ್ಪ ದಾದಾಪುರ, ಕಮಲಾಕರ್ ಹಡಪದ ಇತರರಿದ್ದರು.