

ಚಿಂಚೋಳಿ: ರೈತರಿಗೆ ಸಂಘದಿಂದ ಸಿಗುವ ಸೌಲಭ್ಯ ಕಲ್ಪಿಸಲಾಗುತ್ತದೆ.ರೈತರ ಕಲ್ಯಾಣಕ್ಕಾಗಿ ಸಾಲ ಸೌಲಭ್ಯ ನೀಡಲಾಗುತ್ತದೆ ರೈತರು ಇದರ ಸದುಪಯೋಗ ಪಡೆಯಬೇಕು ಎಂದು ನೂತನವಾಗಿ ಸಹಕಾರ ಸಂಘದ ಕಾರ್ಯದರ್ಶಿ ಸಂತೋಷಕುಮಾರ ಓಂಕಾರ ಹೇಳಿದರು.
ತಾಲೂಕಿನ ಐನೊಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾ ರಿಯಾಗಿ ಸಂತೋಷಕುಮಾರ ಓಂಕಾರ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಸಹಕಾರ ಸಂಘಗಳ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ, ಸದಸ್ಯ ಸಹಕಾರದೊಂದಿಗೆ ಪತ್ತಿನ ಸಹಕಾರ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಮಾತನಾಡಿದರು.
ನಂತರ ಪತ್ತಿನ ಸಹಕಾರ ಸಂಘದ ಸದಸ್ಯರು ಹಾಗೂ ಮುಖಂಡರು ನೂತನವಾಗಿ ಅಧಿಕಾರ ಸ್ವೀಕರಿಸಿದ ಕಾರ್ಯದರ್ಶಿಗೆ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಸಂಘದ ಅಧ್ಯಕ್ಷಶಂಕರ್ ಚಿಂಚೊಳಿಕರ್, ಶಶಿಕಲಾ ಮುರುಡ, ಉದಯಕುಮಾರ್ ಬೆನಕಿನ, ಚನ್ನಬಸಪ್ಪ ಸಿದ್ಧಪ್ಪ ಇಟಗಿ, ರಾಮಣ್ಣ ಚಿಂಚೊಳಿಕರ್, ಸುಜಾತ ಪುಣ್ಯಶೆಟ್ಟಿ, ಚಂದ್ರಶೇಖರ ಇನಾಮದಾರ, ಬಸವರಾಜ ಪರೀಟ್ , ಘಾಳಪ್ಪ , ಚಂದ್ರಶೇಖರ ಮುತ್ತಪ್ಪನ್, ಬಕ್ಕಪ್ಪ ಗೌನಳ್ಳಿ ಹಾಗೂ ಇನ್ನಿತರರು ಇದ್ದರು