ಚಿಂಚೋಳಿ ಶಾಸಕ ಡಾ. ಅವಿನಾಶ ಜಾಧವ್ ತೆಲಂಗಾಣದ ಭುವನಗಿರಿ ಕ್ಷೇತ್ರದ ಉಸ್ತುವಾರಿ

IMG-20230827-WA0007
Published on

ಚಿಂಚೋಳಿ: ಗಡಿ ತಾಲೂಕಿನ ಶಾಸಕ ಡಾ. ಅವಿನಾಶ ಜಾಧವ್ ಅವರಿಗೆ ತೆಲಂಗಾಣದ ಭುವನಗಿರಿ ಕ್ಷೇತ್ರದ ಉಸ್ತುವಾರಿ ನೀಡಿದ್ದು, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಮನೆ ಮನೆ ಭೇಟಿ ನೀಡಿ ಪ್ರಚಾರ ನಡೆಸುತ್ತಿದ್ದಾರೆ.

ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಯೋಜನೆಗಳನ್ನು ಮನವರಿಕೆ ಮಾಡುವ ಮೂಲಕ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.

ಈ ವೇಳೆ ನಾರಾಯಣ ರೆಡ್ಡಿ, ಸಿ.ಎನ್.ರೆಡ್ಡಿ, ಶ್ರೀನಿವಾಸ ಗೌಡ, ಮಹೇಂದ್ರ, ದಶರಥ, ಲಾವಣ್ಯ, ನರಸಿಂಗರಾವ್, ಮೊಗಲಯ್ಯ, ನರೇಂದ್ರ, ಮಹೇಂದ್ರ ಗುಪ್ತಾ, ತಿರುಮಲ ರೆಡ್ಡಿ, ಶೇಖರ್ ರೆಡ್ಡಿ, ರಾಜಶೇಖರ ಸೇರಿದಂತೆ ಅನೇಕ ಗಣ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net