

ಚಿಂಚೋಳಿ: ತಾಲೂಕಿನಾದ್ಯಂತ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ರೈತರು ಬೆಳೆದ ಬೆಳೆಗಳು ಹಾನಿಗೊಳಗಾಗಿವೆ ಎಂದು ಜಿ.ಪಂ ಮಾಜಿ ಸದಸ್ಯ ಗೌತಮ್ ಪಾಟೀಲ್ ಹೇಳಿದರು.
ಅನಾವೃಷ್ಟಿ, ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ವಿಮಾ ಮಾಡಿಸಿದ ರೈತರು ಜಾಗೃತರಾಗಬೇಕು. ವಿಮಾ ಕಂಪನಿಯವರಿಗೆ ಬೆಳೆ ಹಾನಿ ಬಗ್ಗೆ ತಿಳಿಸಲು ಹೋದಾಗ ಮಳೆಯಾದ 72 ಗಂಟೆಗಳ ಒಳಗೆ ದೂರು ದಾಖಲಿಸಬೇಕಾಗಿ ಹೇಳುತ್ತಿದ್ದಾರೆ. ಕಾರಣ ವಿಮೆ ತುಂಬಿದ ಕ್ಷೇತ್ರದ ಎಲ್ಲ ರೈತರು ಕೂಡಲೇ ಸಹಾಯವಾಣಿ ನಂಬರಿಗೆ ಕರೆ ಮಾಡಿ ತಮ್ಮ ದೂರು ದಾಖಲಿಸಿ, 42 ಗಂಟೆ ಒಳಗಡೆ ಹಾನಿಯಾದ ಬೆಳೆಗಳಿಗೆ ಜಿ.ಪಿ.ಎಸ್ ಮಾಡಿಸಿ ಪರಿಹಾರಕ್ಕೆ ಅರ್ಹರಾಗಬೇಕು ಎಂದು ತಿಳಿಸಿದ್ದಾರೆ.
ಒಂದು ವೇಳೆ ದೂರು ಸಲ್ಲಿಸಿದರೂ, ವಿಮಾ ಕಂಪನಿಯವರು ಬೆಳೆ ಸಮಿಕ್ಷೆಗೆ ಬಾರದಿದರೇ ಸಂಬಂಧ ಪಟ್ಟ ಕೃಷಿ ಸಹಾಯಕ ನಿರ್ದೇಶಕರಿಗೆ ದೂರು ಸಲ್ಲಿಸುವಂತೆ ರೈತರಿಗೆ ಮನವಿ ಮಾಡಿದ್ದಾರೆ.