ಚಿಂಚೋಳಿ: ರೈತರ ಸಮಸ್ಯೆಗೆ ಸ್ಪಂದಿಸುವ ವ್ಯಕ್ತಿಗೆ ನಮ್ಮ ಬೆಂಬಲ, ಪಕ್ಷಕ್ಕೆ ಅಲ್ಲ- ಪಿಕಾರ್ಡ್ ಬ್ಯಾಂಕ್ ಸದಸ್ಯ ಪಾಟೀಲ

IMG-20230906-WA0138
Published on

ಚಿಂಚೋಳಿ: ಪಟ್ಟಣದ ಪಿಕಾರ್ಡ್ ಬ್ಯಾಂಕ್ ಆಡಳಿತ ಮಂಡಳಿಗೆ ಜರುಗಿದ ಚುನಾವಣೆಯಲ್ಲಿ ಯಾವುದೇ ಪಕ್ಷದ ಚಿಹ್ನೆ ಮೂಲಕ ಗೆಲುವು ಸಾಧಿಸಿಲ್ಲ. ನಾವು ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ವ್ಯಕ್ತಿಯನ್ನು ನೋಡಿ ಮತ ಚಲಾಯಿಸುತ್ತೇವೆ ಎಂದು ನೂತನ ಪಿಕಾರ್ಡ್ ಬ್ಯಾಂಕ್ ಸದಸ್ಯ ಹಣಮಂತರಾವ ಪೋಲಿಸ್ ಪಾಟೀಲ್ ಸ್ಪಷ್ಟ ಪಡಿಸಿದ್ದಾರೆ.

ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ‌ ಮಾತನಾಡಿದ ಅವರು, ನಾವು ಬಿಜೆಪಿ ಪಕ್ಷದ ಕಾರ್ಯಕರ್ತರು, ಆದರೆ ರೈತರ ಅಭಿವೃದ್ಧಿಗಾಗಿ ಸ್ಥಾಪಿತಗೊಂಡ ಪಿಕಾರ್ಡ್ ಬ್ಯಾಂಕ್ ಯಾವುದೇ ಪಕ್ಷಕ್ಕೆ ಸಿಮಿತವಿಲ್ಲ. ಯಾವುದೇ ಪಕ್ಷದ ಗುರುತಿನ ಚಿಹ್ನೆ ಮೂಲಕ ಗೆಲುವು ಸಾಧಿಸಿಲ್ಲ. ಕೆಲವು ಮಾಧ್ಯಮಗಳು ಪಕ್ಷಕ್ಕೆ ಸಿಮಿತಗೊಳಿಸುತ್ತಿರುವುದು ಖಂಡಿಸುತ್ತೇನೆ ಎಂದರು.

ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ವ್ಯಕ್ತಿಯನ್ನು ನೋಡಿ ಮತ ಹಾಕುತ್ತೇವೆ. ಪಕ್ಷಕ್ಕೆ ಅಲ್ಲ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net