ಚಿಂಚೋಳಿ: ಬೀಳಗಿಯಲ್ಲಿ ರೈತ ಮುಖಂಡನ ಮೇಲೆ ಹಲ್ಲೆ ಖಂಡಿಸಿ ಕುರುಬ ಸಂಘದಿಂದ ಪ್ರತಿಭಟನೆ

IMG-20230829-WA0023
Published on

ಚಿಂಚೋಳಿ: ಬಾಗಲಕೋಟ ಜಿಲ್ಲೆಯ ಬೀಳಗಿಯಲ್ಲಿ ರೈತರ ಮುಖಂಡರ ಮೇಲೆ ಹಲ್ಲೆ ಮಾಡಿರುವ ಘಟನೆ ಖಂಡಿಸಿ ಪಟ್ಟಣದ ಕನಕ ವೃತ್ತದಿಂದ ತಹಸೀಲ್ದಾರ್ ಕಚೇರಿ ವರೆಗೆ ಕರ್ನಾಟಕ ಪ್ರದೇಶ ಕುರುಬರ ಸಂಘವು ಬೃಹತ್ ಮೆರವಣಿಗೆ ಮಂಗಳವಾರ ನಡೆಸಲಾಯಿತು.

ಪ್ರತಿಭಟನೆ ಉದ್ದೇಶಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಕಾರ್ಯದರ್ಶಿ ರೇವಣಸಿದ್ದಪ್ಪ ಅಣಕಲ್ ಮಾತನಾಡಿದ, ಕೂಡಲೇ ಯಲ್ಲಪ್ಪ ಹೆಗ್ಗಡೆಯವರ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಬೇಕು. ಯಲ್ಲಪ್ಪ ಹೆಗಡೆಯವರಿಗೆ ಸೂಕ್ತ ಚಿಕಿತ್ಸೆ ಕೊಡಬೇಕು. ಸೂಕ್ತ ಭದ್ರತೆ ಒದಗಿಸಬೇಕು ಎಂಬ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.

ಹೋರಾಟದಲ್ಲಿ ಹಣಮಂತ ಪೂಜಾರಿ, ಗೋಪಾಲ ಗಾರಂಪಳ್ಳಿ, ರವಿ ದಸ್ತಾಪೂರ, ರಾಜಕುಮಾರ ಕನಕಪೂರ, ಗಂಗಾಧರ ಗಡ್ಡಿಮನಿ, ಸೋಮು ಚಿಂಚೋಳಿ, ರಂಗಣ್ಣ ಪೋಲಿಸ್, ಮಲ್ಲಿಕಾರ್ಜುನ ಪೂಜಾರಿ, ಅಂಜಪ್ಪ ಕಲ್ಲೂರ, ಮಹಾದೇವ ಚಿಮ್ಮಇದಲಾಯಿ, ರಾಮಚಂದ್ರ, ತುಳಜಪ್ಪ ಚಿಂಚೋಳಿ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net