ಚಿಂಚೋಳಿ: ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಕಾಂಗ್ರೇಸ್, ಉಪಾಧ್ಯಕ್ಷ ಸ್ವತಂತ್ರ

IMG-20230914-WA0014
Published on

ಚಿಂಚೋಳಿ: ತಾಲೂಕಿನ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ನೂತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಿತು.

ನೂತನ ಚಂದ್ರಕಲಾ ಗಂಡ ಲಿಂಗಶೇಟ್ಟಿ ತಟ್ಟೆಪಲ್ಲಿ 9 ಮತುಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಹಣಮಂತರಾವ ಪಾಟೀಲ್ 6 ಮತಗಳನ್ನು ಪಡೆದು ಪರಾಭವಗೊಂಡರು. ಅಮರಜೀವನ ರಮೇಶ ಯಾಕಾಪೂರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸೇಡಂ ಸಹಕಾರ ಸಂಘಗಳ ಸಹಾಯಕ ನಿರ್ದೇಶಕ ರವೀಂದ್ರ ತಿಳಿಸಿದರು.

ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ :ಕಾಂಗ್ರೇಸ್ ಬೆಂಬಲಿತ ಚಂದ್ರಕಲಾ ತಟ್ಟೆಪಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಕಾಂಗ್ರೇಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.ಈ ವೇಳೆ ಸುಭಾಷ್ ರಾಠೋಡ, ನಾಗೇಶ್ವರ ಮಾಲಿ ಪಾಟೀಲ್, ಶಿವಶರಣರೆಡ್ಡಿ ಸೇಡಂ, ಸುರೇಶ್ ಪಾಟೀಲ್, ಅನೀಲಕುಮಾರ ಜಮಾದಾರ, ರಾಮಶೇಟ್ಟಿ ಪವಾರ, ಮಧುಸೂದನ ರೆಡ್ಡಿ, ಬಾಬುರಾವ್ ಪಾಟೀಲ, ಬಸಯ್ಯ ಗುತ್ತೇದಾರ, ಬಸವರಾಜ ಮಾಲಿ, ಮುಕುಂದರೆಡ್ಡಿ ಖರ್ಚಖೇಡ, ಲಿಂಗಶೇಟ್ಟಿ ತಟ್ಟೆಪಲ್ಲಿ, ಜಗನ್ನಾಥ ಕಟ್ಟಿ, ಶರಣು ಪಾಟೀಲ, ಸಂತೋಷ ಗುತ್ತೇದಾರ, ಮಾಹದೇವಪ್ಪ ಭೀಮಳ್ಳಿ, ಅಬ್ದುಲ್ ಬಾಸೀದ, ಡಾ.ತುಕರಾಮ ಪವಾರ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net