

ಚಿಂಚೋಳಿ: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಗೆ ಭಾನುವಾರ ಚುನಾವಣೆ ಜರುಗಲಿದೆ ಎಂದು ವ್ಯವಸ್ಥಾಪಕ ನಾಗಣ್ಣ ಯಲ್ದೆ ತಿಳಿಸಿದರು.
ಒಟ್ಟು 14 ಸ್ಥಾನಗಳಿದ್ದು, 9ಕ್ಕೆ ಅವಿರೋಧ ಆಯ್ಕೆ ನಡೆದಿದೆ. ಇನ್ನುಳಿದ 5 ಸ್ಥಾನಗಳಿಗೆ ಶ್ರೀನಿವಾಸ ಬಂಡಿ, ಶರಣಗೌಡ ಮುದ್ದಾ, ಶ್ರೀಹರಿ ಕಾಟಾಪುರ, ಶಬ್ಬೀರ್ ಅಹ್ಮದ್, ಶಾಮರಾವ ಧೂಳಪ್ಪ, ಚಂದ್ರಕಲಾ ತಟ್ಟೆಪಳ್ಳಿ, ನರಸಮ್ಮ ಶಿರೋಳ್ಳಿ, ಜಗನ್ನಾಥ ಸಜ್ಜನ್, ಹಣಮಂತರಾವ ಪಾಟೀಲ್, ಪಂಚಾಕ್ಷರಯ್ಯ ಸ್ವಾಮಿ, ನಾಗರೆಡ್ಡಿ ಕರ್ಚಖೇಡ ಕಣದಲ್ಲಿದ್ದಾರೆ. ಚಿಂಚೋಳಿ 88, ಸಾಲಗಾರರಲ್ಲದ ಚಿಂಚೋಳಿ ಕ್ಷೇತ್ರ 163, ನಿಡಗುಂದಾ 96, ಮಿರಿಯಾಣ 21, ಕೋಡ್ಲಿ 50 ಮತದಾರರಿದ್ದಾರೆ.
ಅವಿರೋಧವಾಗಿ ಆಯ್ಕೆಯಾದವರು; ಜಗದೀಶಸಿಂಗ್ ಠಾಕೂರ್(ಪೋಲಕಪಳ್ಳಿ), ಅಮರಜೀವನ ಆರ್. ಯಾಕಾಪುರ (ಗರಗಪಳ್ಳಿ), ಕಾಶೀನಾಥ ಪೂಜಾರಿ (ಸುಲೇಪೇಟ), ಸುಜಾತಾ (ಚಿಮ್ಮನಚೋಡ), ಸುಭಾಷ ಮಂತ್ರಿ (ಚಂದನಕೇರಾ), ಗೋಪಾಲರೆಡ್ಡಿ (ಐನಾಪುರ), ದಶರಥ ಭೀಮರಾವ (ಕುಂಚಾವರA), ಮಹಾದೇವಪ್ಪ ಭೀಮಳ್ಳಿ (ರಟಕಲ್), ಮಲ್ಲಿಕಾರ್ಜುನ ಬೇಳಕೇರಿ (ಚಿಮ್ಮಇದಲಾಯಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.