ಚಿಂಚೋಳಿ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಶಾಸಕ ಜಾಧವ್ ಚಾಲನೆ

IMG-20230909-WA0013
Published on

ಚಿಂಚೋಳಿ: ಕ್ರೀಡೆಗಳು ಯುವ ಪೀಳಿಗೆಯ ಮಾನಸಿಕ, ದೈಹಿಕ ಸಾಮರ್ಥ್ಯ ಹೆಚ್ಚಿಸುವ ಮೂಲಕ ಆರೋಗ್ಯವಂತರಾಗಿ ಬಾಳಲು ಸಹಕಾರಿಯಾಗಲಿದೆ ಎಂದು ಶಾಸಕ ಡಾ.ಅವಿನಾಶ ಜಾಧವ್ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆಯು 2023-24 ನೇ ಸಾಲಿನ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಸೋಲೆ ಗೆಲುವಿನ ಸೋಪಾನ ಎಂದು ಅರಿತು ಕ್ರೀಡೆಯಲ್ಲಿ ಭಾಡವಹಿಸಿ ಸ್ಪರ್ಧೆಯಾಗಿ ತೆಗೆದುಕೊಳ್ಳದೆ ಎಲ್ಲರೂ ಒಗ್ಗೂಡಿ ಕ್ರೀಡೆ ಆನಂದಿಸಿ ಎಂದರು.ದೈಹಿಕ ಶಿಕ್ಷಕರು ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಸಮನಾಗಿ ಕಾಣಬೇಕು. ತಾರತಮ್ಯ ಧೋರಣೆ ಅನುಸರಿಸಿದೆ ಎಲ್ಲರೂ ನಿಮ್ಮ ಶಾಲೆಯ ಮಕ್ಕಳು ಎಂದು ಭಾವಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು ಎಂದು ಮಾತನಾಡಿದರು.

ನಂತರ ಮಕ್ಕಳಿ ಹಸ್ತಚಾಚಿ ಶುಭಾಶಯಗಳು ಕೊರುವ ಮೂಲಕ ಕ್ರೀಡೆಗೆ ಅಧಿಕೃತ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಪೋಲಕಪಳ್ಳಿ ಗ್ರಾ.ಪಂ ಅಧ್ಯಕ್ಷೆ ಜಗಮ್ಮ ನರಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತ ರಾಠೋಡ, ಕ.ಸಾ.ಪ ಅಧ್ಯಕ್ಷ ಸುರೇಶ್ ದೇಶಪಾಂಡೆ, ಗೋಪಾಲರಾವ್ ಕಟ್ಟಿಮನಿ, ಕೆ.ಎಂ.ಬಾರಿ, ಶ್ರೀಮಂತ ಕಟ್ಟಿಮನಿ, ಅಮರ ಲೋಡ್ಡನೂರ, ಜಗದೀಶಸಿಂಗ ಠಾಕೂರ್, ಅಶೋಕ್ ಚವ್ಹಾಣ, ರಾಜು ಪವಾರ್, ಗಿರಿರಾಜ ನಾಟೀಕಾರ, ಸುರೇಶ್ ಕೊರವಿ, ಮಲ್ಲಿಕಾರ್ಜುನ ಪಾಲಾಮೂರ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net