ಚಿಂಚೋಳಿ: ಗೃಹಲಕ್ಷ್ಮಿ ಮಹತ್ವದ ಮೈಲಿಗಲ್ಲು- ಸುಭಾಷ್ ರಾಠೋಡ್

IMG-20230830-WA0072
Published on

ಚಿಂಚೋಳಿ: ಭಾರತದ ಸಂವಿಧಾನದಲ್ಲಿ ದತ್ತುವಾಗಿರುವ ಕಲ್ಯಾಣ ರಾಜ್ಯ ಸ್ಥಾಪನೆಯಲ್ಲಿ ಗೃಹ ಲಕ್ಷ್ಮಿ ಕಾರ್ಯಕ್ರಮ ಒಂದು ಮಹತ್ವದ ಮೈಲಿಗಲ್ಲು ಎಂದು ಕಾಂಗ್ರೇಸ್ ಮುಖಂಡ ಸುಭಾಷ್ ರಾಠೋಡ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಪಟ್ಟಣದ ಶ್ರೀ ಹಾರಕೂಡ ಚನ್ನಬಸವ ಶಿವಯೋಗಿಗಳ ಮಠದಲ್ಲಿ ತಾಲೂಕು ಆಡಳಿತ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಗೃಹ ಲಕ್ಷ್ಮಿ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಆರ್ಥಿಕತೆಯ ಬೆನ್ನೆಲಬು ನಾರಿ ಶಕ್ತಿ, ಕರ್ನಾಟಕ ರಾಜ್ಯದ ಮಹಿಳೆಯರಿಗೆ ಶಕ್ತಿ ತುಂಬುವ ಮೂಲಕ ಸದೃಢ, ಸಮಾನತೆಯ ಸಮಾಜ ಕಟ್ಟುವ ಪ್ರಯತ್ನ ಕರ್ನಾಟಕದ ಕಾಂಗ್ರೇಸ್ ಸರಕಾರ ಮಾಡಿದೆ ಎಂದರು.

ಯೋಜನೆ ಜಾರಿಗೆ ಶ್ರಮಿಸಿದ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಕಲಬುರ್ಗಿ ಜಿಲ್ಲೆಯಲ್ಲಿ ಯೋಜನೆ ಕಾರ್ಯಕ್ರಮದ ವಿಕ್ಷಣೆಗೆ ಸೂಕ್ತ ಮುಂದಾಳತ್ವ ವಹಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದರು.

ಇದಕ್ಕೂ ಮುಂಚೆ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಲಕ್ಷ್ಮಿ ಯೋಜನೆಗೆ ಚಾಲನೆಯ ನೀಡಿದ ಕಾರ್ಯಕ್ರಮದ ನೇರ ಪ್ರಸಾರವನ್ನು ಗೃಹಿಣಿಯರು, ರಾಜಕೀಯ ಗಣ್ಯರು ವಿಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ತಾ.ಪಂ ಇಓ ಶಂಕರ್ ರಾಠೋಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗುರುಪ್ರಸಾದ್ ಕವಿತಾಳ, ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ್ ಧನ್ನಿ, ಪುರಸಭೆ ಸದಸ್ಯ ಆನಂದ ಟೈಗರ್, ರವಿ ಪಾಟೀಲ್, ಲಕ್ಷ್ಮಣ ಆವಂಟಿ, ಡಾ.ತುಕರಾಮ ಪವಾರ, ಹೀರಾಸಿಂಗ ಜಾಧವ್, ಜಗನ್ನಾಥ ಕಟ್ಟಿ, ನರಸಮ್ಮ ಆವಂಟಿ ಸೇರಿದಂತೆ ಸಹಸ್ರಾರು ಮಹಿಳೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net