

ಚಿಂಚೋಳಿ: ಅತಿ ಹಿಂದುಳಿದ ಸಮುದಾಯದಲ್ಲಿ ಜನಿಸಿದ ದೇವಾನಂದ ಕೊರಬಾ ಆತ್ಮಹತ್ಯೆಗೆ ಕಾರಣಿಭೂತರಾದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಅಂಬೀಗರ ಚೌಡಯ್ಯ ಭವನದಿಂದ ತಹಸೀಲ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಲಾಯಿತು.
ತಾಲೂಕು ರಾಷ್ಟೀಯ ಮೂಲನಿವಾಸಿ ಕೋಲಿ ಕಬ್ಬಲಿಗ ಯುವ ಸಂಘಟನೆ ಅಧ್ಯಕ್ಷ ಮೌನೇಶ್ ಮುಸ್ತರಿ ಮಾತನಾಡಿ, ಕೂಡಲೇ ದೇವಾನಂದ ರಾಮಚಂದ್ರಪ್ಪ ಅವರ ಆತ್ಮಹತ್ಯೆಗೆ ಕಾರಣವಾದ ಆರೋಪಿಗಳನ್ನು ಬಂಧಿಸಬೇಕು. ಈ ಘಟನೆಗೆ ಕಾರಣವಾದ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ದೇವಾನಂದ ಕೋರಬಾ ರವರ ಕುಟುಂಬಸ್ಥರಿಗೆ ಸರಕಾರಿ ಹುದ್ದೆಯನ್ನು ಕಲ್ಪಿಸಬೇಕು ಎಂದು ಅಗ್ರಹಿಸಿದರು.
ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಮಣಿ ಪತ್ರ ಸಲ್ಲಿಸಲಾಯಿತು.
ಮಾರುತಿ ಗಂಜಗೇರಾ, ರಾಜು ತೋಡಿ, ಹಣಮಂತ ಪೂಜಾರಿ, ಗೋಪಾಲ ಗಾರಂಪಳ್ಳಿ, ಹಣಮಂತ ಭೋವಿ ಸೇರಿದಂತೆ ಅನೇಕರು ಇದ್ದರು