ಚಿಂಚೋಳಿ; ಎಲ್ಲರಲ್ಲಿರಲಿ ಪರೋಪಕಾರ ಗುಣ, ದೇಶಪ್ರೇಮ- ನಿರಗುಡಿ ಮುತ್ಯಾ

PH 06
Published on

ಚಿಂಚೋಳಿ: `ಲೋಕಾಃ ಸಮಸ್ತಾಃ ಸುಖಿನೋ ಭವಂತು' ಎಂಬ ಘೋಷವಾಕ್ಯದಂತೆ ಪ್ರತಿಯೊಬ್ಬರೂ ಪರೋಪಕಾರ ಗುಣ ಮತ್ತು ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದು ಜೈಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ನಿರಗುಡಿಯ ಶ್ರೀ ಹವಾ ಮಲ್ಲಿನಾಥ ಮಹಾರಾಜರು ಹೇಳಿದರು.

ಚಿಮ್ಮನಚೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಳ ಮುಲ್ಲಾಮಾರಿ ಜಲಾಶಯ ದಡದಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ 7ನೇ ಜಾತ್ರೋತ್ಸವ ನಿಮಿತ್ತ ಸೋಮವಾರ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಪ್ರತಿಯೊಬ್ಬರೂ ಸಾಮರಸ್ಯದ ಜೀವನ ನಡೆಸಬೇಕು. ಕುಟುಂಬದಲ್ಲಿ ಯಾವುದೇ ಸಮಸ್ಯೆ ಬಂದರೂ ಒಗ್ಗೂಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಹಿತೋಪದೇಶ ನೀಡಿದರು.

ತಾಪಂ ಇಒ ಶಂಕರ ರಾಠೋಡ್, ಗ್ರಾಪಂ ಪಿಡಿಒ ಗೋವಿಂದರೆಡ್ಡಿ, ಕಾರ್ಯದರ್ಶಿ ಜಗನ್ನಾಥ ಚಟ್ನಳ್ಳಿ, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಅರವಿಂದ ಕೊಳ್ಳೂರ, ಪ್ರಮುಖರಾದ ಗೋಪಾಲ ಬಾಜೆಪಲ್ಲಿ, ಶಿವಕುಮಾರ ಹಿರೇಮಠ, ಜಗದೀಶ ಚನಕೆಪಳ್ಳಿ, ಭಂಡಾರೆಡ್ಡಿ ಆಡಕಿ, ರಮೇಶ ಭೂತಪುರ, ರಾಮರೆಡ್ಡಿ ಪಾಟೀಲ್, ಗುರು ಮರಪಳ್ಳಿ, ಶರಣು ಕಂಪ್ಲಿ, ಶಂಕರಜೀ ಹೂವಿನಹಿಪ್ಪರಗಿ, ಲಕ್ಷö್ಮಣ ಅವಂಟಿ, ಶ್ರೀಧರ ವಗ್ಗಿ ಇತರರಿದ್ದರು. ಚಿಮ್ಮನಚೋಡದ ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ಕಲಾವಿದ ತುಕಾರಾಮ ಭಕ್ತಂಪಳ್ಳಿ ಸಂಗೀತ ಸೇವೆ ಸಲ್ಲಿಸಿದರು.

ಚಿಮ್ಮನಚೋಡ ಕ್ರಾಸ್‌ನಿಂದ ದೇವಸ್ಥಾನವರೆಗೂ ಶ್ರೀಗಳ ಬೃಹತ್ ಮೆರವಣಿಗೆ ನಡೆಯಿತು. ಬಳಿಕ ಶ್ರೀಗಳು ಶಿವಲಿಂಗಕ್ಕೆ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ನೆರವೇರಿಸಿದರು. ಭಕ್ತರಿಗೆ ಶೇಂಗಾವನ್ನು ಪ್ರಸಾದವನ್ನಾಗಿ ನೀಡಿ ಆಶೀರ್ವದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net