ಚಿಂಚೋಳಿ: ಉನ್ನತ ಗುರಿ ತಲುಪಲು ಗುರುವಿನ ಗುಲಾಮನಾಗಿ

IMG-20230905-WA0020
Published on

ಚಿಂಚೋಳಿ: ಪ್ರತಿಯೊಬ್ಬರು ಗುರುವಿನ ಗುಲಾಮನಾಗುವತನಕ ಮುಕುತಿ ದೊರೆಯದು ಎಂಬುದು ತಿಳಿದು ಬಾಳಿದರೆ ಬದುಕು ಸ್ವರ್ಗವಾಗುತ್ತದೆ ಎಂದು ಪ್ರೌಢಶಾಲಾ ಮುಖ್ಯಗುರು ಉಷಾ ಮೇಡಂ ಹೇಳಿದರು.

ತಾಲೂಕಿನ ರೋಡ್ ಕಲ್ಲೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಮಂಗಳವಾರದಂದು ಸರ್ವೇಪಲ್ಲಿ ರಾಧಾಕೃಷ್ಣ ಅವರ ಹುಟ್ಟುಹಬ್ಬದ ನಿಮಿತ್ಯ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಹೆತ್ತವರ ಕನಸಿಗೆ ಸಾಕಾರಗೊಳಿಸಲು ಮಕ್ಕಳು ಶ್ರಮಿಸಬೇಕು. ಸಮಾಜದಲ್ಲಿ ಗುರು ಹಿರಿಯರ ಮಾರ್ಗದರ್ಶನದಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಮಾತನಾಡಿದರು.

ಈ ವೇಳೆ ಶಿಕ್ಷಕರಾದ ಅಂಬೀಕಾ, ಚಂದ್ರಕಲಾ, ಗೌರಮ್ಮ, ಸಾವಿತ್ರಿ, ಶೃತಿ, ಸವಿತಾ, ಸುಮಿತ್ರಾ, ಸುಜಾತ, ತ್ರೀವೇಣಿ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಶಾಂತಾಬಾಯಿ ಕಲ್ಲೂರ ಸೇರಿದಂತೆ ಅನೇಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net