ಚಿಂಚೋಳಿ; ಇಸ್ರೋ ವಿಜ್ಞಾನಿಗಳಿಗೆ ರಟಕಲ್​ ಶ್ರೀ ಅಭಿನಂದನೆ

SWAMIji
Published on

ಚಿಂಚೋಳಿ: ಚಂದ್ರನ ದಕ್ಷಿಣ ದೃವದ ಮೇಲೆ ಚಂದ್ರಯಾನ -3 ನೌಕೆಯ ವಿಕ್ರಮ ಲ್ಯಾಂಡರ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿರುವುದು ನಮ್ಮ ಭಾರತ ದೇಶಕ್ಕೆ ಹೆಮ್ಮೆಯ ವಿಷಯ ಎಂದು ರಟಕಲ ಶ್ರೀಮಠದ ಷ.ಬ್ರ ಶ್ರೀ ರೇವಣಸಿದ್ದ ಶಿವಾಚಾರ್ಯರು ಹರ್ಷ ವ್ಯಕ್ತಪಡಿಸಿದರು.

ಇಂದು ಭಾರತದ ತಂತ್ರಜ್ಞಾನವು ಇತಿಹಾಸದಲ್ಲಿ ಅತ್ಯಂತ ಮಹತ್ವದ ಕಾರ್ಯ ಮಾಡಿದೆ. ವೇದ ಪುರಾಣಗಳಲ್ಲಿ ಖುಷಿ ಮುನಿಗಳು ತಂತ್ರಜ್ಞಾನದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ನೀಡಿದ್ದಾರೆ. ಇಸ್ರೋ ವಿಜ್ಞಾನಿಗಳ ಕಠಿಣ ಪರಿಶ್ರಮದಿಂದ ಚಂದ್ರಯಾನ-3 ಯಶಸ್ವಿ ಆಗಿದ್ದಾರೆ. ಭಗವಂತನ ಕೃಪೆಯಿಂದ ವಿಜ್ಞಾನಿಗಳು ಇನ್ನೂ ಹತ್ತಾರು ಸಂಶೋಧನೆಗಳು ಮೂಡಿ ಬರಲಿ ದೇಶಕ್ಕೆ ಕಿರ್ತಿ ತಂದ ಎಲ್ಲ ವಿಜ್ಞಾನಿಗಳಿಗೂ ಹಾಗೂ ಇಸ್ರೋ ಸಂಸ್ಥೆಗೂ ಅಭಿನಂದನೆಗಳನ್ನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net