

ಚಿಂಚೋಳಿ: ಮಹಾಭಾರತ ಚರಿತ್ರೆ ಪ್ರತಿಯೊಬ್ಬರು ಅರಿಯಬೇಕು. ಹೆಣ್ಣು, ಹೊನ್ನು, ಮಣ್ಣಿಗಾಗಿ ಅವಿಭಕ್ತ ಕುಟುಂಬ ಒಡೆದು ಹಾಳಾಗಿದ್ದು, ಅರಿತು ಒಂದಾಗಿ ಸಾಮಾರಸ್ಯದಿಂದ ಬಾಳಬೇಕು ಎಂದು ಸಂಸ್ಥೆಯ ಅಧ್ಯಕ್ಷೆ ಅಶ್ವಿನಿ ಪಾಟೀಲ್ ಹೇಳಿದರು.
ತಾಲೂಕಿನ ಚಿಮ್ಮನಚೋಡ ಗ್ರಾಮದ ವಿಶ್ವಗಂಗಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ಯ ಶಾಲಾ ಮಕ್ಕಳು ಶ್ರೀಕೃಷ್ಣ, ರಾಧೆ ವೇಷಭೂಷಣದೊಂದಿಗೆ ಆಗಮಿಸಿ ಅದ್ಧೂರಿಯಾಗಿ ಕೃಷ್ಣ ಜನ್ಮಾಷ್ಟಮಿ ಆಚರಿಸಿ ಮಾತನಾಡಿದ ಅವರು, ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರ, ದೇಶ ಪ್ರೇಮ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ರೇಷ್ಮಾ ರಾಜೇಂದ್ರ, ವಿಶ್ವನಾಥರೆಡ್ಡಿ ಬಕ್ಕಾ, ರಾಜಶ್ರೀ ಪದ್ಮಕಾರ್ ಯಾದವ್, ಶ್ರೀಮತಿ ಪುರಖಾನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.