

ಚಿಂಚೋಳಿ: ಪ್ರತಿಯೊಬ್ಬರು ಧರ್ಮದ ದಾರಿಯಲ್ಲಿ ಸಾಗಬೇಕು. ಅಧರ್ಮಕ್ಕೆ ಉಳಿಗಾಲವಿಲ್ಲ. ಸತ್ಯಕ್ಕೆ ಸಾವಿಲ್ಲ ಎಂದು ತಾ.ಪಂ ಇಓ ಶಂಕರ್ ರಾಠೋಡ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತ್ ಕಾರ್ಯಾಲಯದ ಸಭಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ಯ ಶ್ರೀಕೃಷ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಕುಟುಂಬಗಳು ವಿಭಕ್ತವಾಗುತ್ತಿವೆ ಎಂದರು.ಅವಿಭಕ್ತರಾಗಿ ಒಗ್ಗೂಡಿ ಬಾಳುವ ಮೂಲಕ ಧರ್ಮದ ದಾರಿಯಲ್ಲಿ ನಡೆದರೆ ಜೀವನ ಸಾರ್ಥಕವಾಗುತ್ತದೆ ಎಂದು ಪ್ರಪಂಚಕ್ಕೆ ಸಾರಿದವರು ಶ್ರೀ ಕೃಷ್ಣ ಪರಮಾತ್ಮರ ಆದರ್ಶ ಪ್ರತಿಯೊಬ್ಬರು ಪಾಲಿಸೋಣ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಶಿವಶಂಕ್ರಯ್ಯ ಸ್ವಾಮಿ, ನಾಗೇಂದ್ರಪ್ಪ ಸುಲೇಪೇಟ, ಚಂದ್ರಕಾಂತ ಕೇರಳ್ಳಿ ಸೇರಿದಂತೆ ಅನೇಕರು ಇದ್ದರು.