

ಚಿಂಚೋಳಿ: ಪಟ್ಟಣದಲ್ಲಿ ಕಳೆದ 8 ವರ್ಷಗಳಿಂದ ಛತ್ರಪತಿ ಶಿವಾಜಿ ಯುವಕ ಸಂಘವು ಗಣೇಶ ಉತ್ಸವ ಆಚರಿಸುತ್ತಿದ್ದು, ಈ ಬಾರಿ ಉತ್ಸವ ನಿಮಿತ್ತ ಯುವ ಶಕ್ತಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಕಿರಣ್ ಪಂಚಾಳ ತಿಳಿಸಿದರು.
ಶ್ಲೋಕ ಪಠಣ, ಭಾವಾರ್ಥ ಸ್ಪರ್ಧೆ ನಡೆಯಲಿದೆ. ಶಾಸ್ತ್ರ, ಪುರಾಣ, ಉಪನಿಷತ್, ಭಗವದ್ಗಿತೆ, ಶರಣರ ವಚನಗಳು, ದಾಸಸಾಹಿತ್ಯ, ಭಕ್ತಿಗೀತೆಗಳು, ಭಾವಗೀತೆಗಳು, ಸನಾತನ ಧರ್ಮದ ಕುರಿತು 12 ವರ್ಷದ ಒಳಗಿನ ಮಕ್ಕಳು 1 ನಿಮಿಷದ ವಿಡಿಯೋ ಮಾಡಿ, ಸೆ.16 ರೊಳಗೆ ಮೊ. 8880888665 ಗೆ ಕಳುಹಿಸಬೇಕು. ಅತ್ಯುತ್ತಮ ಶ್ಲೋಕ ಪಠಣೆ ಮಾಡಿದ ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಿ, ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.