

ಚಿಕ್ಕೋಡಿ: ತಾಲೂಕಿನ ಚಿಂಚಣಿಯ ಶ್ರೀ ಅಲ್ಲಮಪ್ರಭು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಈಚೆಗೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಸತೀಶ ಅಪ್ಪಾಜಿಗೋಳ ಹಾಗೂ ಉಪಾಧ್ಯಕ್ಷೆಯಾಗಿ ಅಲ್ಕಾ ಪಾಟೀಲ ಅವಿರೋಧ ಆಯ್ಕೆಯಾಗಿದ್ದಾರೆ.
ಸತೀಶ ಅಪ್ಪಾಜಿಗೋಳ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯಾಗಿದ್ದು, ರೈತರು ಹಿತ ಕಾಪಾಡುವಲ್ಲಿ ಪಿಕೆಪಿಎಸ್ ಸಂಘಗಳು ಮುಂಚೂಣಿಯಲ್ಲಿವೆ ಎಂದರು.
ಅಭಯ ಪಾಟೀಲ, ಅನಿಲ ಪಾಟೀಲ, ಸೌರಭ ಪಾಟೀಲ. ಸುಭಾಷ ಚೌಗಲಾ, ಸುಕಮಾರ ಅಪ್ಪಾಜಿಗೋಳ, ಸುರೇಶ ಹೆಗಡೆ, ಎಸ್.ಎನ್. ಪಾಟೀಲ, ಲಕ್ಷ್ಮಣ ಡಂಗೇರ, ಪ್ರಭು ಬಿಲಗೆ, ಸಚಿನ ಪರೀಟ್, ಸಂಜೀವ ಯಾದವ, ಶ್ರೀಕಾಂತ ಕಬಡಿಗೆ, ರವಿ ಸನದಿ, ಬಸವರಾಜ ಮಾನೆ, ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಡಂಗೇರ ಮತ್ತು ಕಾರ್ಯನಿರ್ವಾಹಕ ಸಂಜೀವ ಕಬಾಡಿಗೆ ಇತರರಿದ್ದರು.