ಚಾಲನೆ ವೇಳೆ ಚಾಲಕನಿಗೆ ಮೂರ್ಛೆ!

Published on

ಮಧುಗಿರಿ: ಕೆಎಸ್​ಆರ್​ಟಿಸಿ ಬಸ್​ ಚಾಲನೆ ಸಂದರ್ಭದಲ್ಲೇ ಚಾಲಕನಿಗೆ ಮೂರ್ಛೆ (ಫಿಟ್ಸ್​) ಬಂದ ಹಿನ್ನೆಲೆಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಬಸ್​ನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಬಚಾವಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ನೆಲ ಮಂಗಲ ಡಿಪೋ, ಚಿತ್ರದುರ್ಗ ವಿಭಾಗಕ್ಕೆ ಸೇರಿದ ಬಸ್​ ಡಿ.25ರಂದು ಪಾವಗಡದಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಮಡಕಶಿರಾ ಪಟ್ಟಣದ ಮಾರುತಿ ನಗರದ ಬಳಿ ಚಾಲಕನಿಗೆ ಫಿಟ್ಸ್​ ಬಂದಿದೆ. ಈ ವೇಲೆ ರಸ್ತೆ ಪಕ್ಕ ನಿಂತಿದ್ದ ವ್ಯಕ್ತಿಗೆ ಬಸ್​ ಡಿಕ್ಕಿ ಹೊಡೆದು, ಒಂದು ಗೂಡ್ಸ್​ ಆಟೋ ಮತ್ತು ಬೈಕ್​ಗೆ ಡಿಕ್ಕಿಯಾಗಿದೆ. ಬಸ್​ ಡಿಕ್ಕಿ ಹೊಡೆಯಾಗಿ ರೈತ ನಾರಾಯಣ ಅವರ ತಲೆಗೆ ತೀವ್ರವಾಗಿ ಗಾಯವಾಗಿದ್ದು ನಾಲ್ಕು ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಮಡಕಶಿರಾ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಬಸ್​ ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net