ಸುಂಟಿಕೊಪ್ಪ: ಸುಂಟಿಕೊಪ್ಪ ವಾಹನ ಚಾಲಕರ ಸಂಘದ 2025-26ನೇ ಸಾಲಿನ ದ್ವಿತೀಯ ಬಾರಿಗೆ ಅಧ್ಯಕ್ಷರಾಗಿ ಕೆ.ವಿ.ಕಿಟ್ಟಣ್ಣ ರೈ, ಪ್ರಧಾನ ಕಾರ್ಯದರ್ಶಿಯಾಗಿ ಮುನೀರ್ ಕಂಬಿಬಾಣೆ, ಖಜಾಂಚಿಯಾಗಿ ಅಜೀಜ್ ಕೊಡರಗರಹಳ್ಳಿ ಅವರನ್ನು ನೇಮಕ ಮಾಡಲಾಯಿತು.
ಸಂಘದ ಸಾರ್ವಜನಿಕ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ಕಿಟ್ಟಣ್ಣ ರೈ ವಹಿಸಿದ್ದರು.
ಕಳೆದ ಸಾಲಿನ ಲೆಕ್ಕಪತ್ರ ಮಂಡನೆಯ ನಂತರ 2025-26ನೇ ಸಾಲಿನ ಆಡಳಿತ ಮಂಡಳಿ ನೇಮಕಗೊಳಿಸಲಾಗಿತು.
ಅಧ್ಯಕ್ಷರಾಗಿ ಕೆ.ವಿ.ಕಿಟ್ಟಣ್ಣ ರೈ, ಉಪಾಧ್ಯಕ್ಷರಾಗಿ ಅಬ್ದುಲ್ಲಕುಟ್ಟಿ, ಬಿ.ಎ.ಕೃಷ್ಣಪ್ಪ, ಸಹಕಾರ್ಯದರ್ಶಿ ಪಟ್ಟೆಮನೆ ಎಸ್.ರಕ್ಷಿತ್ ರೀನು, ಸಂಘಟನಾ ಕಾರ್ಯದರ್ಶಿಯಾಗಿ ರಿಜ್ವಾನ್, ಕಾರ್ಯಕಾರಿ ಸಮಿತಿಗೆ ಸಿ.ಎ.ಬಸಪ್ಪ, ರಾಜ, ಇನಾಸ್ ಡಿಸೋಜ, ಕೆ.ರವಿ, ಸಂದೀಪ್, ಬಿ.ಕೆ.ಸುರೇಶ್, ಅಸೀಸ್ ಹೊಸಕೋಟೆ, ಅಸ್ಕರ್, ಜೈನುದ್ದೀನ್, ಶಕ್ತಿವೇಲು, ರಫೀಕ್, ಮೊನು, ಮಣಿರಾಜ್ ತಂಬಿ, ಎಂ.ಎ.ದೇವಯ್ಯ, ಜಿ.ಕುಮಾರ, ಎಂ.ಎಸ್.ಶಾಜಿ, ಸಲೀಂ ಗದ್ದೆಹಳ್ಳ, ಸಲಹಾ ಸಮಿತಿ ಸದಸ್ಯರಾಗಿ ಆರ್.ರಾಜ, ಇಸ್ಮಾಯಿಲ್ ಕಾಕು ಆಯ್ಕೆಯಾದರು.
ಇದೇ ಸಂದರ್ಭ ಕಳೆದ ಬಾರಿ ಸಂಘವನ್ನು ಅತ್ಯುತ್ತಮವಾಗಿ ಮುನ್ನಡೆಸಿದ್ದ ಸಂಘದ ಅಧ್ಯಕ್ಷ ಕೆ.ವಿ.ಕಿಟ್ಟಣ್ಣ ರೈ ಹಾಗೂ ಚಾಲಕ ಸಿ.ಎ.ಬಸಪ್ಪ ಅವರನ್ನು ನೂತನ ಪದಾಧಿಕಾರಿಗಳು ಸನ್ಮಾನಿಸಿದರು.