ಚಾಲಕನಿಂದಲೇ ರೆಫ್ರಜರೇಟರ್ ಕಳ್ಳತನ

Crime Logo
Published on

ಕಲಬುರಗಿ: ಕಂಟೇನರ್ ಚಾಲನೆ ಮಾಡಿಕೊಂಡು ಬಂದಿದ್ದ ಚಾಲಕನೇ ಅದರಲ್ಲಿನ ರೆಫ್ರಿಜರೇಟರ್‌ಗಳನ್ನು ಕಳ್ಳತನ ಮಾಡಿರುವ ಕುರಿತು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಾರಾಷ್ಟçದ ಪುಣೆಯ ಗೌರವ ಶಿಂಧೆ ಕಂಟೇನರ್ ಮಾಲಿಕ ದೂರು ನೀಡಿದ್ದಾರೆ.
ಸ್ಟೇರಿಯಾನ್ ಇಂಡಿಯಾ ಪ್ರೆÊವೇಟ್ ಕಂಪನಿಯಿAದ ಹ್ಯಾವೆಲ್ಸ್ ಕಂಪನಿಗೆ ೧೨೦ ಲೋಡಿ ರೆಫ್ರಜರೇಟರ್‌ಗಳನ್ನು ಪುಣೆಯಿಂದ ಆಂಧ್ರಪ್ರದೇಶಕ್ಕೆ ಸಾಗಣೆ ಮಾಡಬೇಕಿತ್ತು. ಗೌರವ ಶಿಂಧೆ ಕಂಟೇನರ್‌ನ್ನು ಚಾಲಕ ಸುರೇಶ ಬಂಡಗಾರ್ ಚಾಲನೆ ಮಾಡಿಕೊಂಡು ಬಂದಿದ್ದಾನೆ. ಮಾರ್ಗಮಧ್ಯೆ ನಗರದ ಹೊರವಲಯದಲ್ಲಿ ನಿಲ್ಲಿಸಿದ್ದು, ಸಂಪರ್ಕ ಕಡಿತಗೊಂಡಿದೆ. ಮಾಲಿಕ ಗೌರವ ಶಿಂಧೆ ಜಿಪಿಎಸ್ ಆಧಾರದ ಮೇಲೆ ಸ್ಥಳಕ್ಕೆ ಬಂದು ವೀಕ್ಷಿಸಿದಾಗ ಚಾಲಕ ಸ್ಥಳದಲ್ಲಿ ಇರಲಿಲ್ಲ. ಕಂಟೇನರ್ ಕೊಂಡಿ ಬಿಚ್ಚಿದ್ದು, ೨೭ ರೆಫ್ರಜರೇಟರ್‌ಗಳು ಕಾಣೆಯಾಗಿವೆ. ಚಾಲಕನ ಮೇಲೆ ಸಂಶಯವಿದೆ ಎಂದು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net