ಚಾಲಕನ ಜೀವ ಉಳಿಸಿದ ಸೀಟ್ ಬೆಲ್ಟ್

16 hbd 01
Published on

ಹುಮನಾಬಾದ್: ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ನಾಲ್ಕೆದು ಬಾರಿ ಪಲ್ಟಿಯಾಗಿ ನಜ್ಜುಗುಜ್ಜಾದರೂ ಸೀಟ್ ಬೆಲ್ಟ್ ಧರಿಸಿದ್ದರಿಂದ ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ಶನಿವಾರ ನಡೆದಿದೆ.

ಬೀದರ್ ತಾಲೂಕಿನ ಬಾವಗಿ ಗ್ರಾಮದ ಸುನೀಲ್ ಚಿದ್ರಿ(೨೪) ಅಪಘಾತದಲ್ಲಿ ಅಪಾಯದಿಂದ ಪಾರಾದ ಕಾರು ಚಾಲಕ. ಕಲಬುರಗಿಯಿಂದ ಬೀದರ್‌ಗೆ ಬೆಳಗ್ಗೆ ೧೦.೩೦ರ ವೇಳೆಗೆ ಕಾರಿನಲ್ಲಿ ಹೊರಟಿದ್ದಾಗ ರಾಷ್ಟಿಯ ಹೆದ್ದಾರಿ ಚೀನಕೇರಾ ಕ್ರಾಸ್ ಹತ್ತಿರ ಪಲ್ಟಿಯಾಗಿದೆ. ಕಾರಿನಲ್ಲಿ ಚಾಲಕ ಮಾತ್ರ ಇದ್ದ. ಅಪಘಾತದ ತೀವ್ರತೆ ನೋಡಿದರೆ ಒಳಗಿದ್ದವರು ಉಳಿಯಬಾರದು. ಆದರೆ ಚಾಲಕ ಸೀಟ್ ಬೆಲ್ಟ್ ಧರಿಸಿದ್ದರಿಂದ ಬದುಕುಳಿದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಸಂಚಾರ ಠಾಣೆ ಪಿಎಸ್‌ಐ ಬಸವಲಿಂಗ ಗೋದಿಹಾಳ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು, ಹುಮನಾಬಾದ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net