

ಮೂಡಿಗೆರೆ: ಹಸಿರು ಫೌಂಡೇಶನ್‌ನಿಂದ ಬಣಕಲ್ ಪೊಲೀಸ್ ಠಾಣೆ ಮುಂಭಾಗದಿಂದ ಚಾರ್ಮಾಡಿ ಘಾಟ್‌ನ ಜಿಲ್ಲಾ ಕೊನೇ ಪ್ರದೇಶದವರೆಗೂ ಸೋಮವಾರ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಸ್ವಚ್ಛತಾ ಕಾರ್ಯದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ಕೈಗಾರಿಕಾ ತರಬೇತಿ ಸಂಸ್ಥೆ ವಿದ್ಯಾರ್ಥಿಗಳು ಹಾಗೂ ಹಸಿರು ಫೌಂಡೇಶನ್ ಕಾರ್ಯಕರ್ತರು ಭಾಗವಹಿಸಿದ್ದರು.
ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಿಜೆಪಿ ಮುಖಂಡ ಕುರುವಂಗಿ ವೆಂಕಟೇಶ್ ಮಾತನಾಡಿ, ಬಳಸಿದ ಪ್ಲಾಸ್ಟಿಕ್, ಕೋಳಿತ್ಯಾಜ್ಯ, ಕತ್ತರಿಸಿದ ತಲೆ ಕೂದಲು ಸೇರಿದಂತೆ ವಿವಿಧ ರೀತಿಯ ಕಸವನ್ನು ರಸ್ತೆ ಬದಿ ಎಸೆದು ಹೋಗುತ್ತಾರೆ. ಇದನ್ನು ಪ್ರಾಣಿಗಳು ತಿಂದರೆ ಜೀವಕ್ಕೆ ಅಪಾಯ ಉಂಟಾಗಲಿದೆ. ಜಾನುವಾರು ಮತ್ತು ಬೀದಿನಾಯಿಗಳು ಇಂಥ ತ್ಯಾಜ್ಯ ತಿಂದು ಪ್ರಾಣಕಳೆದುಕೊಂಡಿವೆ. ರಸ್ತೆ ಬದಿ ಮತ್ತು ಹರಿಯುವ ನೀರಿಗೆ ತ್ಯಾಜ್ಯ ತಂದು ಹಾಕುವವರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಸಿರು ಫೌಂಡೇಶನ್ ಅಧ್ಯಕ್ಷ ರತನ್ ಊರುಬಗೆ ಮಾತನಾಡಿ, ಹಸಿರು ಫೌಂಡೇಶನ್‌ನಿಂದ ಸಮಾಜ ಸೇವೆ ಮಾಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ನಮ್ಮ ಸಂಸ್ಥೆಯೊಂದಿಗೆ ಕೈ ಜೋಡಿಸಬೇಕು. ಸ್ವಚ್ಛತೆ ಕುರಿತು ನಮ್ಮ ಸಂಸ್ಥೆಯಿಂದ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಜಿಲ್ಲಾಡಳಿತ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ತರುವೆ ಗ್ರಾಪಂ ಅಧ್ಯಕ್ಷೆ ಸುಶೀಲಾ ಗೋಪಾಲ್, ಬಣಕಲ್ ಗ್ರಾಪಂ ಸದಸ್ಯ ಮಧುಕುಮಾರ್, ಪ್ರಥಮ ದರ್ಜೆ ಕಾಲೇಜ್ ಸಹ ಪ್ರಾಧ್ಯಾಪಕ ದಯಾನಂದ, ಮುಖಂಡರಾದ ಆರಿಫ್, ಬಿ.ಕೆ.ಲೋಕೇಶ್, ವಿಜಯಕುಮಾರ್, ಸಂಜಯ್ ಕೊಟ್ಟ್ಟಿಗೆಹಾರ, ರಘು, ಪ್ರಭಾಕರ್ ಬಿನ್ನಡಿ, ಪ್ರವೀಣ್, ಸಚಿನ್, ಸುನೀಲ್, ಅಭಿಜಿತ್, ಜಯಂತ್, ಪೂರ್ಣೇಶ್, ಶೋಧನ್ ಇತರರಿದ್ದರು.