

ಕಲಬುರಗಿ: ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರು ಬಸವಾದಿ ಶರಣರ ವಚನ ಸಾಹಿತ್ಯವನ್ನು ಸಂರಕ್ಷಿಸುವ ಚಾರಿತ್ರಿಕ ಕಾರ್ಯ ಮಾಡಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡ ಡಾ.ಫ.ಗು.ಹಳಕಟ್ಟಿ ಜಯಂತಿ ನಿಮಿತ್ತ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ಮಾತನಾಡಿ, ನಶಿಸಿ ಹೋಗುತ್ತಿದ್ದ ವಚನ ಸಾಹಿತ್ಯದ ತಾಳೆಗರಿಗಳನ್ನು ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಗೆ ತೆರಳಿ, ಹುಡುಕಿ, ಸಂಗ್ರಹಿಸಿ ಮುದ್ರಿಸಿದ್ದಾರೆ. ಪೀಳಿಗೆಗೆ ತಲುಪಿಸುವ ಉz್ದೆÃಶದಿಂದ ಅವುಗಳನ್ನು ಗ್ರಂಥ ರೂಪದಲ್ಲಿ ಎಲ್ಲರೂ ಓದಲು ಅನುಕೂಲ ಮಾಡಿಕೊಟ್ಟ ಹಳಕಟ್ಟಿಯವರ ಶ್ರಮ ಅನುಕರಣೀಯ ಎಂದು ಹೇಳಿದರು.
ಪ್ರಾಧ್ಯಾಪಕ ಡಾ.ರವೀಂದ್ರ ಕುಂಬಾರ, ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಎಸ್ ಅಂಡಗಿ, ಪ್ರಮುಖರಾದ ಶಕುಂತಲಾ ಪಾಟೀಲ್, ಜ್ಯೋತಿ ಪಾಟೀಲ್, ಧರ್ಮರಾಜ ಜವಳಿ, ರಮೇಶ ಬಡಿಗೇರ, ರಾಜೇಂದ್ರ ಮಾಡಬೂಳ, ಅಚಲರಾಜ ಅಂಡಗಿ, ಚಂದ್ರಕಾAತ ಸೂರನ್, ಗಣೇಶ ಚಿನ್ನಾಕಾರ, ರೇವಣಸಿದ್ದಪ್ಪ ಜೀವಣಗಿ, ಸಂತೋಷ ಕುಡಳ್ಳಿ ಕಾಳಗಿ, ಶಾಮಸುಮದರ ಕುಲಕರ್ಣಿ, ಎಂ ಎನ್ ಸುಗಂಧಿ ಇತರರಿದ್ದರು.