

ಕೆ.ಆರ್.ನಗರ: ಆಷಾಢ ಮಾಸದ ಎರಡನೇ ಶುಕ್ರವಾರದ ಅಂಗವಾಗಿ ಪಟ್ಟಣದ ವಾಣಿ ವಿಲಾಸ ರಸ್ತೆಯ ಮೊದಲನೇ ಕ್ರಾಸ್‌ನಲ್ಲಿ ಚಾಮುಂಡೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ರಸ್ತೆಯಲ್ಲಿರುವ ಅಂಗಡಿ ಮುಂಗಟ್ಟುಗಳ ವರ್ತಕರು ಸೇರಿ ಬೃಹತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೇವಿ ಕೃಪೆಗೆ ಪಾತ್ರರಾದರು. 15 ವರ್ಷಗಳಿಂದ ವರ್ತಕರು ಯಾವುದೇ ಧರ್ಮ, ಜಾತಿ, ಭೇದವಿಲ್ಲದೆ ಆಷಾಢ ಪೂಜೆ ಆಚರಿಸಿಕೊಂಡು ಬರುತ್ತಿದ್ದಾರೆ. ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಪುರಸಭೆ ಮಾಜಿ ಅಧ್ಯಕ್ಷ ಪ್ರಕಾಶ್, ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ತಿಮ್ಮಶೆಟ್ಟಿ, ಶ್ರೀನಿವಾಸ್ ನಾಯ್ಡು, ರಾಮಕೃಷ್ಣ, ದುರ್ಗಪ್ಪ, ಕಂಠಿರಾವ್, ಮಹಾದೇವ, ಕುಮಾರ್, ಗಣೇಶ, ಲೋಕೇಶ್, ಯೋಗಿ, ಲಿಖಿತ್, ಹಲಗೇಗೌಡ, ವಿಜಿ, ಸಂಜು, ನಂದಕುಮಾರ್, ಸಾಗರ್, ಅನಂತ್, ನವೀನ, ಚಂದ್ರು, ಅರ್ಜುನ್, ಸೋಮಣ್ಣ ಹಾಜರಿದ್ದರು.