

ಸೋಮವಾರಪೇಟೆ: ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ಆಷಾಢ ಶುಕ್ರವಾರದ ಪ್ರಯುಕ್ತ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಪಂಚಾಮೃತ ಅಭಿಷೇಕ, ಕುಂಕುಮ ಅರ್ಚನೆ, ಲಲಿತ ಸಹಸ್ರನಾಮ ನಂತರ ಮಂಗಳಾರತಿ ನೆರವೇರಿತು.
ವೀರಶೈವ ಸಮಾಜದ ಶೆಟ್ರು ಬಿ.ಆರ್.ಮೃತ್ಯುಂಜಯ, ಅಕ್ಕನ ಬಳಗದ ಅಧ್ಯಕ್ಷೆ ಗೀತಾ ರಾಜು, ಉಪಾಧ್ಯಕ್ಷೆ ಸರಿತಾ ಮಲ್ಲಿಕಾರ್ಜುನ್, ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಸದಸ್ಯರು ಇದ್ದರು.