ಚಾಮುಂಡಿಬೆಟ್ಟದಲ್ಲಿ ಮದ್ಯದ ಖಾಲಿ ಬಾಟಲಿಗಳ ರಾಶಿ

28
Published on

ಮೈಸೂರು: ಅರಣ್ಯ ಇಲಾಖೆ ವತಿಯಿಂದ ಸೋಮವಾರ ನಡೆದ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಪರಿಸರ ಬಳಗ ಮತ್ತು ಚಾಮುಂಡಿಬೆಟ್ಟ ಉಳಿಸಿ ಸಮಿತಿಯ 25 ಸದಸ್ಯರು ಭಾಗವಹಿಸಿದ್ದರು.


ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಬೆಳಗ್ಗೆ 7.30ರಿಂದ 9.30ರ ವರೆಗೆ ತಾವರೆಕಟ್ಟೆಯಿಂದ ಸ್ವಚ್ಛತಾ ಕಾರ್ಯ ಜರುಗಿತು. ರಸ್ತೆಯ ಎರಡೂ ಬದಿಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ವಿಲೇವಾರಿ ಮಾಡಿದ್ದು, ಮದ್ಯಪಾನ ಮಾಡಿ ಖಾಲಿ ಬಾಟಲಿಗಳನ್ನು ಇಲ್ಲಿ ಬಿಸಾಡಿದ್ದರು. ಕೇವಲ 200 ಮೀಟರ್ ಅಂತರದಲ್ಲೇ ನೂರಾರು ಖಾಲಿ ಬಾಟಲಿಗಳು ಪತ್ತೆಯಾಗಿವೆ.


ಪ್ಲಾಸ್ಟಿಕ್ ತ್ಯಾಜ್ಯ, ಬಾಟಲಿಗಳನ್ನು ಚಾಮುಂಡಿಬೆಟ್ಟಕ್ಕೆ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಬಿಸಾಡಬಾರದು ಎಂದು ಪರಿಸರ ಬಳಗ ಮತ್ತು ಚಾಮುಂಡಿ ಬೆಟ್ಟ ಉಳಿಸಿ ಸಮಿತಿ ಸಂಸ್ಥಾಪಕ ಸದಸ್ಯ ಪರಶುರಾಮೇಗೌಡ ಕೋರಿದರು.


ಸಂಘಟನೆಯ ಮುಖಂಡರಾದ ಲೀಲಾ ಶಿವಕುಮಾರ್, ಪ್ರಮೀಳಾ ರವೀಂದ್ರ, ಗಂಟಯ್ಯ, ಕುಮಾರ್, ಆನಂದ ಮೂರ್ತಿ, ಸಿದ್ದಲಿಂಗಯ್ಯ, ಕುಸುಮ ಆಯರಹಳ್ಳಿ , ಭಾಗ್ಯ ಶಂಕರ್, ಅಂಜನಾ, ಕಲಾ, ಜಾನಕಿ, ಶ್ರೀಲಕ್ಷ್ಮೀ, ನಾಗೇಶ್, ದೇವರಾಜ್, ಚಂದ್ರಶೇಖರ್, ನಂಜುಂಡ , ಮನು, ಸಮರ್ಥ, ಅಶ್ವಥ್, ಗಿರೀಶ್ ಮುಂತಾದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net