ಚಾಮುಂಡಿಬೆಟ್ಟದಲ್ಲಿ ತಾಯಿಯ ಮಡಿಲು ಕುಟೀರ

chamundi hills
Published on

ಮೈಸೂರು: ಚಾಮುಂಡಿಬೆಟ್ಟಕ್ಕೆ ಭೇಟಿ ನೀಡುವ ತಾಯಂದಿರು ತಮ್ಮ ಶಿಶುಗಳಿಗೆ ಹಾಲುಣಿಸಲೆಂದು ಮೈಸೂರು ಗೋಲ್ಡ್ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ತಾಯಿಯ ಮಡಿಲು ಕುಟೀರ ತೆರೆಯಲಾಗಿದೆ.

ಮಾತೃತ್ವ ಕುಟುಂಬ ಸಂತೋಷದ ವಿಷಯ. ಆದರೆ, ತಾಯಂದಿರು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಶಿಶುಗಳಿಗೆ ಹಾಲುಣಿಸಲು ಮುಜುಗರ ಪಡುವ ಸ್ಥಿತಿ ಇದೆ.

ಹೀಗಾಗಿ ತಮ್ಮ ಕ್ಲಬ್ ವತಿಯಿಂದ ಸುಮಾರು 40 ಸಾವಿರ ರೂ. ವೆಚ್ಚದಲ್ಲಿ ಬೆಟ್ಟದ ಪೊಲೀಸ್ ಉಪಠಾಣೆ ಪಕ್ಕದಲ್ಲಿ ಈ ಕುಟೀರ ತೆರೆಯಲಾಗಿದ್ದು, ಬೆಟ್ಟಕ್ಕೆ ಭೇಟಿ ನೀಡುವ ತಾಯಂದಿರು ಇದರ ಪ್ರಯೋಜನ ಪಡೆಯಬೇಕು ಎಂದು ಕ್ಲಬ್ ಅಧ್ಯಕ್ಷೆ ಪ್ರೇಮಾ ರವಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇಲ್ಲಿ ಏಕಕಾಲದಲ್ಲಿ ಮೂವರು ತಾಯಂದಿರುವ ತಮ್ಮ ಶಿಶುಗಳಿಗೆ ಹಾಲುಣಿಸಲು ಸ್ಥಳಾವಕಾಶ, ಸೌಲಭ್ಯ ಕಲ್ಪಿಸಲಾಗಿದೆ. ಜ.3ರಂದು ಬೆಳಗ್ಗೆ 10.30ಕ್ಕೆ ಚಾಮುಂಡಿಬೆಟ್ಟ ಗ್ರಾಪಂ ಅಧ್ಯಕ್ಷೆ ನಾಗರತ್ನಾ ಉದ್ಘಾಟಿಸುವರು ಎಂದರು.

ಪದಾಧಿಕಾರಿಗಳಾದ ಅಂಜಲಿ, ಉಮಾ, ನಳಿನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net