ಚಾಮರಾಜೇಶ್ವರ ದೇಗುಲದ ಹುಂಡಿಯಲ್ಲಿ 9.85 ಲಕ್ಷ ರೂ. ಸಂಗ್ರಹ

19Rajesh5
Published on

ಚಾಮರಾಜನಗರ: ನಗರದ ಇತಿಹಾಸ ಪ್ರಸಿದ್ಧ ಶ್ರೀಚಾಮರಾಜೇಶ್ವರ ದೇಗುಲದ ಹುಂಡಿ ಎಣಿಕೆ ಕಾರ್ಯ ಮಂಗಳವಾರ ನಡೆದಿದ್ದು, 9 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿದೆ. ದೇಗುಲದಲ್ಲಿ ಬೆಳಗ್ಗೆ ಆರಂಭಗೊಂಡ ಕಾಣಿಕೆ ಎಣಿಕೆಯ ಕಾರ್ಯದಲ್ಲಿ 9,85,905 ರೂ. ಕಾಣಿಕೆ ಸಿಕ್ಕಿತು. 2023ರ ಸೆ.30ರಂದು ನಡೆದಿದ್ದ ಹುಂಡಿ ಎಣಿಕೆಯಲ್ಲಿ 4,30,680 ಸಂಗ್ರಹವಾಗಿತ್ತು. ಈ ಸಲ ಕಾಣಿಕೆ ಮೊತ್ತ ಮತ್ತಷ್ಟು ಹೆಚ್ಚಾಗಿದೆ. ತಹಸೀಲ್ದಾರ್ ಗಿರಿಜಾ, ದೇವಸ್ಥಾನದ ಕಾರ್ಯ ನಿರ್ವಾಹಕ ರಾಜಶೇಖರ ಮೂರ್ತಿ, ವಿಎ ರಮೇಶ್, ದೇವಸ್ಥಾನದ ಅರ್ಚಕ ದರ್ಶನ್, ದೇವಸ್ಥಾನದ ಕಮಿಟಿಯ ಸದಸ್ಯರಾದ ವೆಂಕಟ ನಾಗಪ್ಪ ಶೆಟ್ಟಿ, ಸುರೇಶ್ ನಾಯಕ್, ಮಾಜಿ ಅಧ್ಯಕ್ಷ ಶ್ರೀನಿವಾಸ ಗೌಡ , ಮಾದಣ್ಣ, ಎಂ.ಜಯ್ಕುಮಾರ್, ಸಿ.ಎಸ್.ನಾಗರಾಜ್, ಸುರೇಶ, ಸ್ವಾಮಿ, ಗಣೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net