ಚಾಮರಾಜುಗೆ ಸ್ನೇಹಿತರಿಂದ ಶ್ರದ್ಧಾಂಜಲಿ ಸಲ್ಲಿಕೆ

13Rajesh1
Published on

ಚಾಮರಾಜನಗರ: ಸೋಮವಾರ ನಿಧನರಾದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಪುತ್ರ ಪಿ.ಚಾಮರಾಜುಗೆ ನಗರದ ಸ್ನೇಹಿತರ ಬಳಗದಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಿ. ಚಾಮರಾಜು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಒಂದು ನಿಮಿಷ ಮೌನಾರ್ಚನೆ ಮಾಡಿ, ಆವರ ಆತ್ಮಕ್ಕೆ ಶಾಂತಿ ಕೋರಿ ಅವರ ಕುಟುಂಬ ವರ್ಗಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಕೃಷ್ಣಕುಮಾರ್, ಮಾರ್ಕೆಟ್ ಗಿರಿ, ಕೇಶವಮೂರ್ತಿ, ವಕೀಲ ನಾಗಾರ್ಜುನ ಪೃಥ್ಬಿ, ಮಂಜು, ಮಹೇಶ್, ನಾಗಣ್ಣ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net