

ಚಾಮರಾಜನಗರ: ಮಲೆ ಮಹದೇಶ್ವರ ಹಾಗೂ ಮಂಟೇಸ್ವಾಮಿ ಕಾವ್ಯ ವಿಶ್ವದಲ್ಲೇ ಶ್ರೇಷ್ಠವಾದ ಮಹಾಕಾವ್ಯವಾಗಿವೆ ಎಂದು ಶ್ರೀಗಂಧ ಕನ್ನಡ ವೇದಿಕೆ ಅಧ್ಯಕ್ಷ ರವಿಚಂದ ಪ್ರಸಾದ್ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯ ಜಾನಪದ ಕುರಿತು ಅವರು ಮಾತನಾಡಿದರು.
ಮಂಟೇಸ್ವಾಮಿ, ಸಿದ್ದಪ್ಪಾಜಿ, ಮಹದೇಶ್ವರ ಶಿಷ್ಯರ ನೀಲಗಾರರ ಪರಂಪರೆಯಾಗಿದ್ದು. ಜಾನಪದ ಸಿರಿ ಹೊಂದಿರುವ ಜಿಲ್ಲೆ ಚಾಮರಾಜನಗರವಾಗಿದೆ. ಜಿಲ್ಲೆಯು ಕಲೆಗಳ ತವರೂರಾಗಿದ್ದು, ಇಲ್ಲಿ ಅನೇಕ ಕಲಾಪ್ರಕಾರಗಳನ್ನು ಕಾಣಬಹುದಾಗಿದ್ದು, ವಿವಿಧತೆಯಲ್ಲಿ ಏಕತೆ ಹೊಂದಿರುವ ಜಿಲ್ಲೆ ಇದಾಗಿದೆ. ಕಲೆ, ಸಾಹಿತ್ಯ, ಸಂಗೀತ, ಸಿನಿಮಾ, ನಾಟಕ, ಜಾನಪದ, ಗಮಕ, ಸುಗಮ ಸಂಗೀತ, ಮಂಗಳವಾದ್ಯ ತಂಬೂರಿಪದ, ಕೊಂಬುಕಹಳೆ, ವೀರಗಾಸೆ ಸೇರಿದಂತೆ ಅನೇಕ ಕಲಾಪ್ರಕಾರಣ ನೆಲೆಬೀಡು ಜಿಲ್ಲೆಯಾಗಿದೆ ಎಂದರು.
ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಕಾರ್ಯದರ್ಶಿ ಚಾ.ವೆಂ.ರಾಜ್ ಗೋಪಾಲ್, ಮಹೇಶ್‌ಗೌಡ, ಕೆ.ಎಂ.ನಾಗರಾಜು, ಬಸವರಾಜನಾಯಕ, ಪಣ್ಯದಹುಂಡಿ ರಾಜು, ಸರಸ್ವತಿ, ಪೋತರಾಜು, ನಂಜುಂಡಶೆಟ್ಟಿ, ಶಿವಲಿಂಗಮೂರ್ತಿ, ರಾಚಪ್ಪ ಇತರರು ಹಾಜರಿದ್ದರು.