ಚಾಮರಾಜ ಒಡೆಯರ್ ಕೊಡುಗೆ ಅಪಾರ

29kgl4
Published on

ಕೊಳ್ಳೇಗಾಲ: ಚಾಮರಾಜ ಒಡೆಯರ್, ಪತ್ನಿ ಕೆಂಪನಂಜಮ್ಮಣ್ಣಿ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸ್ಮರಿಸದಿದ್ದರೆ ದಸರಾ ಹಬ್ಬ ಪೂರ್ಣವಾಗುವುದಿಲ್ಲ ಎಂದು ಶಾಸಕ ಎನ್.ಮಹೇಶ್ ಅಭಿಪ್ರಾಯಪಟ್ಟರು.


ಪಟ್ಟಣದ ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬುಧವಾರ ಸಂಜೆ ತಾಲೂಕು ಆಡಳಿತ ಆಯೋಜಿಸಿದ್ದ ಗ್ರಾಮೀಣ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚಾಮರಾಜ ಒಡೆಯರ್ ಜನಿಸಿದ್ದು ನಮ್ಮ ಜಿಲ್ಲೆಯಲ್ಲೇ. ನಾಡಿಗೆ ನೀಡಿದ ಕೊಡುಗೆ ಅಪಾರ. ಚಾಮರಾಜೇಶ್ವರ ದೇವಸ್ಥಾನದಲ್ಲಿ ಚಾಮರಾಜ ಒಡೆಯರ್ ಹಾಗೂ ಪತ್ನಿ ಕೆಂಪನಂಜಮ್ಮಣ್ಣಿ ಅವರ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ. ನಿತ್ಯವೂ ಪೂಜಿಸಲಾಗುತ್ತಿದೆ. ಈ ಮಹನೀಯರು ದೈವೀ ಸ್ವರೂಪಿಗಳಾಗಿದ್ದಾರೆ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಸುಶೀಲಾ, ಉಪವಿಭಾಗಾಧಿಕಾರಿ ಗೀತಾ ಹುಡೇದ್, ಗ್ರೇಡ್ 2 ತಹಸೀಲ್ದಾರ್ ಶಿವಕುಮಾರ್, ಬಿಇಒ ಚಂದ್ರಪಾಟೀಲ್, ವಿಶ್ವ ಚೇತನ ಸಂಸ್ಥೆ ಕಾರ್ಯದರ್ಶಿ ಪ್ರೇಮಲತಾ, ನಗರಸಭಾ ಸದಸ್ಯರಾದ ಕವಿತಾ, ನಟರಾಜು, ಮಧುಚಂದ್ರ, ನೌಕರ ಸಂಘದ ಅಧ್ಯಕ್ಷ ಅಲೆಗ್ಸಾಂಡರ್, ಸರ್ವೇ ಇಲಾಖೆ ಉಪ ನಿರ್ದೇಶಕ ಚೇತನ್, ಸಾಹಿತ್ಯ ಪರಿಷತ್‌ನ ನಾಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net