ಚಾಕು ತೋರಿಸಿ ಚಿನ್ನದ ಸರ ಕಸಿದು ಪರಾರಿ

crime
Published on

ಮೈಸೂರು: ಇಲವಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುಷ್ಕರ್ಮಿಯೊಬ್ಬ ಚಾಕು ತೋರಿಸಿ ಹೆದರಿಸಿ ವ್ಯಾಪಾರಿಯೊಬ್ಬರಿಂದ ಹಣ, ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಮೈಸೂರು ತಾಲೂಕು ಬಸವನಪುರದ ನಿವಾಸಿ, ಮೆಡಿಕಲ್ ಸ್ಟೋರ್ ಮಾಲೀಕ ಸೋಮಶಂಕರ್ ಎಂಬುವರು 16 ಗ್ರಾಂ ಚಿನ್ನದ ಸರ ಹಾಗೂ 3 ಸಾವಿರ ರೂ.ಕಳೆದುಕೊಂಡಿದ್ದಾರೆ.

ರಾತ್ರಿ ವ್ಯಾಪಾರ ಮುಗಿಸಿ ಮನೆಗೆ ತೆರಳುವ ವೇಳೆ ಬೈಕ್ ಅಡ್ಡಗಟ್ಟಿದ ದುಷ್ಕರ್ಮಿ ಚಾಕುವನ್ನು ಕುತ್ತಿಗೆಯ ಬಳಿ ಇಟ್ಟು ಬೆದರಿಸಿದ್ದಾನೆ.

ಅವರ ಬಳಿ ಇದ್ದ ನಗದು ಹಾಗೂ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net