

ಚಿಟಗುಪ್ಪ: ಚಾಂಗಲೇರಾದ ಭವಾನಿ ಮಂದಿರದಲ್ಲಿ ಭಾನುವಾರದಿಂದ ೨೩ರವರೆಗೆ ಸಂಭ್ರಮದ ನವರಾತ್ರಿ ಉತ್ಸವ ಜರುಗಲಿದೆ. ಸ್ಥಳೀಯ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಚಂಡಿಕಾ ಹೋಮ, ದುರ್ಗಾ ಸಪ್ತಶತಿ ಪಾರಾಯಣ ನಡೆಯಲಿವೆ. ನಿತ್ಯ ಭಜನೆ ನಡೆಯಲಿದ್ದು, ಭಜನಾ ತಂಡಗಳಿಗೆ ಮೊದಲ ಬಹುಮಾನ ೮೦೦೧ ರೂ., ಎರಡನೇ ಬಹುಮಾನ ೫೦೦೧ ರೂ., ಮೂರನೇ ಬಹುಮಾನ ೨೫೦೧ ರೂ. ಇದೆ. ಆಸಕ್ತ ಭಜನಾ ಮಂಡಳಿ ೯೭೪೧೦೯೯೧೮೯, ೭೮೦೯೫೦೮೧೯೮ ಸಂಖ್ಯೆಗೆ ಕರೆ ಮಾಡಿ, ನೋಂದಾವಣಿ ಮಾಡಿಕೊಳ್ಳಬಹುದು. ನವರಾತ್ರಿ ನಿಮಿತ್ತ ದೇವಿ ಪಲ್ಲಕ್ಕಿ ಉತ್ಸವ ನೆರವೇರಲಿದೆ. ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ.