ಚಾಂಗಲೇರಾ ಕೆರೆಗೆ ಪ್ರವಾಸಿ ತಾಣದ ಸ್ಪರ್ಶ

mla sir news changlera 3 (1)
????????????
Published on

ಚಿಟಗುಪ್ಪ: ಚಾಂಗಲೇರಾದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಬಳಿ ದಟ್ಟ ಅರಣ್ಯದ ನಿಸರ್ಗ ಮಡಿಲಲ್ಲಿರುವ ಕೆರೆ ಅಭಿವೃದ್ಧಿಪಡಿಸಿ ಬೋಟಿಂಗ್ ಇತರ ಮೂಲಸೌಲಭ್ಯ ಒದಗಿಸಿ ಪ್ರವಾಸಿ ತಾಣವನ್ನಾಗಿ ಮಾಡುವುದಾಗಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ಚಾಂಗಲೇರಾದಲ್ಲಿರುವ ಸಣ್ಣ ನೀರಾವರಿ ಇಲಾಖೆಗೆ ಒಳಪಟ್ಟ ಕೆರೆಗೆ ಮಂಗಳವಾರ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ವೀಕ್ಷಿಸಿದ ಅವರು, ಕೆರೆ ಸುತ್ತಲೂ ದಟ್ಟ ಅರಣ್ಯ, ಹಸಿರಿನಿಂದ ಕಂಗೊಳಿಸುವ ಪ್ರದೇಶವಿದೆ. ಪ್ರಾಣಿ-ಪಕ್ಷಿಗಳಿಗೆ ನೀರಿನ ಮೂಲವಾಗಿದೆ. ನಿತ್ಯ ಸಾವಿರಾರು ಪಕ್ಷಿಗಳು ಕೆರೆಗೆ ಬರುವುದು ವಿಶೇಷ. ಕೆರೆ ಅಭಿವೃದ್ಧಿಪಡಿಸಿ ಚಾಂಗಲೇರಾ, ಕರಕನಳ್ಳಿ ದೇವಸ್ಥಾನಕ್ಕೆ ಬರುವ ಭಕ್ತರಿಗಾಗಿ ಪ್ರವಾಸಿ ತಾಣ ಮಾಡಲಾಗುವುದು ಎಂದರು.
ಈ ಭಾಗದ ಜಮೀನಿಗೆ ನೀರು ಹರಿಸಿ ರೈತರಿಗೆ ಅನುವು ಮಾಡಿಕೊಡಲಾಗುವುದು. ಹಲವು ಸಮಸ್ಯೆಗಳಿಂದ ನಲುಗಿರುವ ಕೆರೆಯನ್ನು ಪರಿಸರ ದೃಷ್ಟಿಯಿಂದ ಉಳಿಸಿಕೊಳ್ಳುವ ತುರ್ತು ಅಗತ್ಯವಿದೆ. ಮಳೆಗಾಲದಲ್ಲಿ ಕೆರೆಗೆ ದೊಡ್ಡ ಕಾಲುವೆಗಳಿಂದ ನೀರು ಹರಿದು ಬರುತ್ತದೆ. ಆದರೆ ಬೇಸಿಗೆಯಲ್ಲಿ ಸೋರಿಕೆಯಾಗಿ ನೀರಿನ ಕೊರತೆ ಉಂಟಾಗದAತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
೩೫ ಹೆಕ್ಟೇರ್ ವಿಸ್ತೀರ್ಣದ ಕೆರೆಯಲ್ಲಿ ೫೮ ಎಂಸಿಎಫ್‌ಟಿ ನೀರು ಶೇಖರಣೆ ಇದೆ. ಎರಡು ಎಡದಂಡೆ, ಬಲದಂಡೆ ಕಾಲುವೆ ಹೊಂದಿದೆ ಎಂದು ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು. ಸಣ್ಣ ನೀರಾವರಿ ಸಹಾಯಕ ಅಭಿಯಂತರ ಎಇ ಸಿದ್ಧಾರೂಢ, ಎಇ ವೈಭವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net