ಚಾ.ನಗರವನ್ನು ಸ್ವಚ್ಚವಾಗಿಡಲು ಸಹಕರಿಸಿ

IMG-20241206-WA0032
Published on

ಚಾಮರಾಜನಗರ: ನಗರವನ್ನು ಸ್ವಚ್ಛವಾಗಿಡಲು ಸಾರ್ವಜನಿಕರು ಸಹಕರಿಸಬೇಕು ಎಂದು ನಗರಸಭಾ ಅಧ್ಯಕ್ಷ ಸುರೇಶ್ ಮನವಿ ಮಾಡಿದರು.

ನಗರದ 19ನೇ ವಾರ್ಡ್‌ ನಲ್ಲಿ ವಿವಾಸಿಗಳಿಗೆ ನಗರಸಭಾ ವತಿಯಿಂದ ಒಣಕಪ್ಪ ಹಸಿಕಸದ ಬುಟ್ಟಿ ವಿತರಿಸಿ ಮಾತನಾಡಿದರು.

ನಗರವನ್ನು ಸ್ವಚ್ಛವಾಗಿಡುವ ಸಲುವಾಗಿ ನಗರಸಭೆ ವತಿಯಿಂದ ನಗರ ವಾಸಿಗಳಿಗೆ ಹಸಿಕಸ, ಒಣಕಸ ಬುಟ್ಟಿ ವಿತರಿಸಲಾಗುತಿದೆ. ಕಸದ ಬುಟ್ಟಿ ಪಡೆದಿರುವ ನಿವಾಸಿಗಳು ಮನೆಯಲ್ಲಿ ಒಣ ಹಸಿ ಕಸ ವಿಂಗಡಿಸಿ  ಬೀದಿಗೆ ಬರುವ ಕಸದ ವಾಹನ ಅಥವಾ ಸಿಬ್ಬಂದಿಗಳಿಗೆ ನೀಡಿ ನಗರದ ಸ್ವಚ್ಛತೆಗೆ ಸಹಕರಿಸಬೇಕು ಎಂದರು.

ವಾರ್ಡ್‌ನ ಸದಸ್ಯ ಶಿವರಾಜ್ ಮಾತನಾಡಿ, ವಾರ್ಡ್‌ನ ನಿವಾಸಿಗಳು ಎಲ್ಲೆಂದರಲ್ಲಿ ಕಸವನ್ನು ಹಾಕದೆ ನಗರಸಭಾ ವತಿಯಿಂದ ನೀಡಿರುವ ಒಣಕಸ, ಹಸಿಕಸ ಬುಟ್ಟಿಗೆ ಕಸವನ್ನು ಶೇಖರಣೆ ಮಾಡಿ ನಗರಸಭಾ ಕಸದ ವಾಹನ ನೀಡುವ ಮೂಲಕ ವಾರ್ಡ್‌ ಸ್ವಚ್ಛತೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪೌರಾಯುಕ್ತ ರಾಮದಾಸ್, ನಗರಸಭಾ ಪರಿಸರ ಇಂಜಿನಿಯರ್ ರೂಪ, ಹಿರಿಯ ಆರೋಗ್ಯ ನಿರೀಕ್ಷಕರಾದ ಸುಷ್ಮಾ, ಮಂಜುನಾಥ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net