ಚಾಮರಾಜನಗರ: ನಗರದ ಪಟ್ಟಣಯ ಠಾಣೆಯ ಮೂವರು ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅಮಾನುತು ಮಾಡಿದ್ದಾರೆ.
ಪಟ್ಟಣ ಠಾಣೆಯ ಪೇದೆಗಳಾದ ಚಂದ್ರೇಗೌಡ, ಮಂಜು, ಚಾಲಕ ಬಸವರಾಜು ಅಮಾನತ್ತುಗೊಂಡಿರುವವರು. ಈ ಕುರಿತು ಎಸ್ಪಿ ಡಾ.ಬಿ.ಟಿ.ಕವಿತಾ ವಿಜಯವಾಣಿಯೊಂದಿಗೆ ಮಾತನಾಡಿ, ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಮೇಲ್ನೋಟಕ್ಕೆ ನಮ್ಮ ಸಿಬ್ಬಂದಿಯ ಪಾಲುದಾರಿಕೆ ಇದೆ ಎನ್ನುವುದು ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ವಿಚಾರಣೆ ಮಾಡಲು ಆದೇಶ ಮಾಡಿ ಸಿಬ್ಬಂದಿಯನ್ನು ಅಮಾನತುಮಾಡಲಾಗಿದೆ ಎಂದಿದ್ದಾರೆ.