ಚಳ್ಳಕೆರೆ ಬುಡಕಟ್ಟು ಸಂಸ್ಕೃತಿಯ ತವರೂರು

CTD ETTINA GADI OTA----...
Published on

ಚಿತ್ರದುರ್ಗ: ಆಧುನೀಕರಣದ ಭರಾಟೆಯಿಂದಾಗಿ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದ ರು. ಯುಗಾದಿ ಹಬ್ಬದ ಅಂಗವಾಗಿ ಸೋಮವಾರ ಚಿತ್ರದುರ್ಗ ತಾಲೂಕು ಹುಣಸೇಕಟ್ಟಯಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಎತ್ತಿನ ಗಾಡಿ ಓಟದ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ,ಹಳ್ಳಿಗಳು ಆಧುನೀಕರಣದತ್ತ ಮುಖ ಮಾಡುತ್ತಿರುವ ಈ ಹೊತ್ತಿನಲ್ಲಿ ಗ್ರಾಮೀಣ ಸೊಗಡಿ ನ ಕ್ರೀಡೆಗಳು ಮಾಯವಾಗುತ್ತಿವೆ. ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಸ್ವರ್ಧೆ ಏರ್ಪಡಿಸಿರುವುದು ಸೂಕ್ತವಾಗಿದೆ. ನನ್ನ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಬುಡಕಟ್ಟು ಸಂಸ್ಕೃತಿಯ ತವರೂರು. ಇಲ್ಲಿ ಬುಡಕಟ್ಟು ಸಂಸ್ಕೃತಿಯ ಆಚರಣೆಗಳು ಅಚ್ಚು ಕಟ್ಟಾಗಿ ನಡೆಯು ತ್ತಾ ಬಂದಿವೆ. ರೈತರಿಗೆ ಎತ್ತುಗಾಡಿ ದೇವರಿದ್ದಂತೆ. ಅವು ಮನೆಯಲ್ಲಿದ್ದರೆ ಲಕ್ಷ್ಮೀ ಇದ್ದಂತೆ ಎಂಬ ನಂಬಿಕೆ ಇದೆ.

ಈ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವು ಪಡೆಯುವುದು ಸುಲಭವಲ್ಲ. ಎತ್ತಿನಗಾಡಿ ಓಡಿಸುವುದು ಒಂದು ರೀತಿಯ ಸಾಹಸವೇ ಸರಿ. ಇದಕ್ಕೆ ಪರಿಣತಿ ಬೇಕಾಗುತ್ತದೆ ಎಂದರು. ಹುಣಸೇಕಟ್ಟೆಗೆ ಕೈನಾಡಿನ 25ಕ್ಕೂ ಹೆಚ್ಚು ಹಸುಗಳನ್ನು ಕೊಡಿಸಿದ್ದು,ಮುಂದಿನ ದಿನಗಳಲ್ಲಿ ಹೈನು ಗಾರಿಕೆಗೂ ಹಂತ ಹಂತವಾಗಿ ಪ್ರೋತ್ಸಾಹ ನೀಡಲಾಗುವುದು.

ತುಂಗಾ-ಭದ್ರಾ ಹಿನ್ನೀರಿಂದ ಚಳ್ಳಕೆರೆ, ಕೂಡ್ಲಿಗಿ,ಮೊಳಕಾಲ್ಮೂರು, ಪಾವಗಡ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಮೂಲಕ ಕುಡಿಯುವ ನೀರು ಒದಗಿಸುವ ಯೋಜನೆ ಪೂರ್ಣಗೊಂಡಿದ್ದು,ಟ್ರಯಲ್ ಮಾಡಲಾಗುತ್ತಿದೆ. ಈ ಯೋಜನೆಯಲ್ಲಿ ತುರುವನೂರು ಹೋಬಳಿಯ ಪ್ರತಿ ಮನೆಗೆ ನೀರು ಬರಲಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ 51 ಕೆರೆಗಳು ಭರ್ತಿಯಾಗಲಿವೆ ಎಂದರು. ಸ್ಪರ್ಧೆಯಲ್ಲಿ ಮೂವತ್ತಕ್ಕೂ ರೈತರು ತಮ್ಮ ಎತ್ತಿನಗಾಡಿಗಳೊಂದಿಗೆ ಸ್ಪರ್ಧೆಯಲ್ಲಿ ಭಾಗ ವಹಿಸಿದ್ದರು.

ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಬಾಬುರೆಡ್ಡಿ,ಕೂನಬೇವು ಗ್ರಾಪಂ ಅಧ್ಯಕ್ಷೆ ಪದ್ಮಾವತಿ,ಸದಸ್ಯರಾದ ಕೆ.ನಿಂಗಮ್ಮ,ಎಸ್.ಪಾಲಯ್ಯ, ಕೆ.ಟಿ.ಯಶೋಧ, ಆರ್ಚನಾ, ಉದ್ಯಮಿ ಪಿ.ವಿ.ಅರುಣ್‌ಕುಮಾರ್,ಮುಖಂಡರಾದ ಗುರುಮೂರ್ತಿ,ಎಚ್.ಕಾಂತರಾಜ್ ,ಮಾರುತಿ, ಮಹಂತೇಶ್,ಏಕಾಂತ ಇತರರಿದ್ದರು.

-----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net