ಅರ್ಥಶಾಸ್ತ್ರ ಮೌಲ್ಯಮಾಪನ ಅರ್ಧ ! ಅನುತ್ತೀರ್ಣ ವಿದ್ಯಾರ್ಥಿನಿ ಮರುಮೌಲ್ಯಮಾಪನಕ್ಕೆ ಅರ್ಜಿ

BOOKlet
Published on
ಚಳ್ಳಕೆರೆ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳ ಅರ್ಥಶಾಸ್ತ್ರ ವಿಷಯದ ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಿ ಲೋಪವೆಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಜೋಗೇಶ್ವರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆರ್.ನಿವೇದಿತಾ ಅವರ (ನೋಂದಣಿ ಸಂಖ್ಯೆ: 180589, ಬುಕ್‌ಲೆಟ್ ಸಂಖ್ಯೆ 3309350) ಅರ್ಥಶಾಸ್ತ್ರ ವಿಷಯದ ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಿ ಮೌಲ್ಯಮಾಪಕರು ನಿರ್ಲಕ್ಷೃ ತೋರಿರುವುದು ಗೋಚರಿಸಿದೆ. ಪರಿಣಾಮ ಈ ವಿದ್ಯಾರ್ಥಿನಿ ಅನುತತೀರ್ಣಳಾಗಿದ್ದಾಳೆ.
ಅರ್ಥಶಾಸ್ತ್ರ ವಿಷಯದಲ್ಲಿ 15 ಪುಟಗಳಷ್ಟು ಉತ್ತರ ಬರೆದಿದ್ದು, ಕೇವಲ 2 ಪುಟ ಮಾತ್ರ ಮೌಲ್ಯಮಾಪನ ಮಾಡಲಾಗಿದೆ. ಉಳಿದ 13 ಪುಟಗಳನ್ನು ಹಾಗೇ ಬಿಡಲಾಗಿದೆ. ಪರಿಣಾಮ ತನಗೆ ಇದರಲ್ಲಿ ಕೇವಲ 15 ಅಂಕ ಲಭಿಸಿದೆ ಎಂದು ವಿದ್ಯಾರ್ಥಿನಿ ನಿವೇದಿತಾ ವಿಜಯವಾಣಿಗೆ ತಿಳಿಸಿದ್ದಾರೆ.
ಕನ್ನಡ- 78, ಇಂಗ್ಲೀಷ್-36, ಇತಿಹಾಸ-38, ರಾಜ್ಯಶಾಸ್ತ್ರ- 60, ಸಮಾಜ ಶಾಸ್ತ್ರ- 67 ಅಂಕ ಪಡೆದಿದ್ದು, ಅರ್ಥಶಾಸ್ತ್ರ ಮಾತ್ರ 15 ಅಂಕ ಬಂದಿದೆ. ಸಂಶಯಗೊಂಡು ಉತ್ತರ ಪತ್ರಿಕೆ ತರಿಸಿಕೊಂಡು ನೋಡಿದರೆ 2 ಪುಟ ಮಾತ್ರ ಮೌಲ್ಯಮಾಪನ ಮಾಡಿ ಉಳಿದ 13 ಪುಟಗಳನ್ನು ಹಾಗೇ ಬಿಟ್ಟಿರುವುದು ಗಮನಕ್ಕೆ ಬಂದಿದ್ದು, ಜು.18ರಂದು ಮರು ಮೌಲ್ಯಮಾಪನಕ್ಕೆ ಹಾಕಿದ್ದೇನೆ. ಆರ್.ನಿವೇದಿತಾ, ಚಳ್ಳಕೆರೆ ವಿದ್ಯಾರ್ಥಿನಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net