ಚಳಿಗಾಲ ಅಧಿವೇಶನ ತಯಾರಿ ಶುರು

IMG_20251013_111126
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.28083315, 0.27097237);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41;
Published on

ಡಿ.ವಿ.ಕಮ್ಮಾರ ಬೆಳಗಾವಿ

ಪ್ರತಿ ವರ್ಷದಂತೆ ಈ ಸಲವೂ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಸಲು ಸರ್ಕಾರ ಸಜ್ಜಾಗಿದ್ದು, ಡಿಸೆಂಬರ 8ರಿಂದ ನಡೆಸಲು ದಿನಾಂಕವನ್ನೂ ನಿಗದಿಗೊಳಿಸಿದೆ. ಹೀಗಾಗಿ ಸುವರ್ಣ ವಿಧಾನಸೌಧವನ್ನು ಸಿದ್ಧಗೊಳಿಸುವ ಕಾರ್ಯಗಳು ಶುರುವಾಗುತ್ತಿದ್ದು, ಕಾಂಪೌಂಡ್ ಸುತ್ತಲೂ ಬೆಳೆದಿರುವ ಕಸಕಂಟಿ ಸ್ವಚ್ಛಗೊಳಿಸುವ ಕೆಲಸ ಸಮರೋಪಾದಿಯಲ್ಲಿ ನಡೆದಿದೆ.

ತಾಲೂಕಿನ ಹಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಈ ಸೌಧ ಒಳಪಡುತ್ತದೆ. ಸೌಧದ ಆವರಣದೊಳಗಿನ ನಿರ್ವಹಣಾ ಕೆಲಸವನ್ನು ಲೋಕೋಪಯೋಗಿ ಇಲಾಖೆ ನೋಡಿಕೊಳ್ಳುತ್ತದೆ. ಆದರೆ ಹೊರಭಾಗದ ಪ್ರದೇಶವನ್ನು ಹಲಗಾ ಗ್ರಾಮ ಪಂಚಾಯಿತಿ ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ಕೆಲಸ ಸೃಷ್ಟಿಸಿ, ಹುಲ್ಲು ಕಟಾವು, ಕಸಕಂಟಿ ಸ್ವಚ್ಛಗೊಳಿಸುವ ಕಾರ್ಯ ಆರಂಭಿಸಲಾಗಿದೆ. ಜತೆಗೆ ಅರಣ್ಯ ಇಲಾಖೆಯವರು ನಿತ್ಯ 15 ಜನ ಕೂಲಿಕಾರರನ್ನು ಉದ್ಯೋಗ ಖಾತ್ರಿಯಡಿ ಪಡೆದುಕೊಂಡು ಸುತ್ತಲೂ ಇರುವ ಗಿಡಮರಗಳ ನಿರ್ವಹಣೆ ಮತ್ತು ಸ್ವಚ್ಛತಾ ಕಾರ್ಯ ನೋಡಿಕೊಳ್ಳುತ್ತಿದ್ದಾರೆ.

ಸುವರ್ಣ ಸೌಧದ ಆವರಣದ ಸುತ್ತಲೂ ಈ ಹಿಂದೆಯೇ 900 ಸಸಿಗಳನ್ನು ನೆಡಲಾಗಿದೆ. ಜತೆಗೆ ಮೂರು ವರ್ಷದಿಂದ ಎದುರು ಭಾಗದ ವಿಜ್ಞಾನ ಪಾರ್ಕ್ ಪಕ್ಕ ಅರಣ್ಯ ಮಾದರಿಯಲ್ಲಿ 900 ಸಸಿಗಳನ್ನು ಬೆಳೆಸಿದ್ದಾರೆ. ಜತೆಗೆ ಸೌಧದ ಹಿಂಭಾಗದಲ್ಲಿಯೂ ವಿವಿಧ ಜಾತಿಯ 900 ಸಸಿ ನೆಟ್ಟಿದ್ದಾರೆ. ಒಟ್ಟು ಅರಣ್ಯ ಇಲಾಖೆಯ 2,700 ಗಿಡಮರಗಳಿದ್ದು, ಮಳೆಯಿಂದಾಗಿ ಸಾಕಷ್ಟು ಕಸಕಂಟಿ ಬೆಳೆದಿದ್ದು, ಸ್ವಚ್ಛಗೊಳಿಸುವ ಕಾರ್ಯ ಆರಂಭಿಸಿದ್ದಾರೆ.

ಇದರ ಹೊರತಾಗಿ ಆವರಣದೊಳಗೆ ಇನ್ನೂ ಅನೇಕ ಕೆಲಸಗಳಾಗಬೇಕಿದೆ. ಮುಂಭಾಗದ ಖಾಲಿ ಜಾಗದಲ್ಲಿಯೂ ಸಾಕಷ್ಟು ಕಸ ಬೆಳೆದಿದೆ. ಈ ಸಲ ಹೆಚ್ಚು ಮಳೆ ಸುರಿದ ಕಾರಣಕ್ಕೆ ಕಟ್ಟಡದ ಹೊರಭಾಗದ ಗೋಡೆಗಳು, ಕಂಬ, ಮೇಲ್ಛಾವಣಿಗಳಲ್ಲಿ ಬೆಳೆದಿರುವ ಪಾಚಿ ಸ್ವಚ್ಛಗೊಳಿಸಬೇಕಿದೆ.

ಕಳೆದ ವರ್ಷ ಅಧಿವೇಶನ ಪೂರ್ವದಲ್ಲಿ ಸುಮಾರು 36 ಲಕ್ಷ ರೂ. ಖರ್ಚು ಮಾಡಿ ವಾಟರ್ ಜೆಟ್ ಮೂಲಕ ಪಾಚಿ ಸ್ವಚ್ಛಗೊಳಿಸಲಾಗಿತ್ತು. ಈ ಸಲ ಮತ್ತೇ ಸ್ವಚ್ಛಗೊಳಿಸಬೇಕಾಗಿದ್ದು, ಪ್ರತಿ ವರ್ಷ ಪಾಚಿ ಸ್ವಚ್ಛತೆಗೆ ಲಕ್ಷಾಂತರ ರೂಪಾಯಿ ವ್ಯಯಿಸಬೇಕಿದೆ.

ಸರ್ಕಾರ ಪ್ರತಿವರ್ಷ ಸೌಧ ನಿರ್ವಹಣೆಗೆ ಲೋಕೋಪಯೋಗಿ ಇಲಾಖೆಗೆ 5 ಕೋಟಿ ರೂ. ಅನುದಾನ ಮೀಸಲಿಡುತ್ತದೆ. ಆದರೆ ಈ ಅನುದಾನ ಕಟ್ಟಡದೊಳಗಿರುವ ವಿವಿಧ ಇಲಾಖೆಗಳ ಕಚೇರಿ, ಉದ್ಯಾನ ನಿರ್ವಹಣೆಗೆ ಮಾತ್ರವೇ ಸಾಲುತ್ತಿದ್ದು, ಕಟ್ಟಡದ ಹೊರಭಾಗದಲ್ಲಿನ ಕಸಕಂಟಿ ಬೆಳೆಯದಂತೆ ನಿರ್ವಹಿಸಲು ಕೊರತೆಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net