ಚಲನಚಿತ್ರರಂಗ ಎಲ್ಲವನ್ನೂ ನೀಡಿದೆ: ನಟ ರಮೇಶ್ ಅರವಿಂದ್

36
Published on

ಮೈಸೂರು: ಜನರು ಒಪ್ಪಿದ್ದರಿಂದಲೇ ಒಂದಾದ ಮೇಲೊಂದರಂತೆ ಚಲನಚಿತ್ರಗಳನ್ನು ಮಾಡುತ್ತಾ ಬಂದೆ. ಎಲ್ಲ ಹಂತದಲ್ಲೂ ಜತೆಗಿದ್ದಿದ್ದರಿಂದ 3 ವರ್ಷ 30 ವರ್ಷವಾಯಿತು. ಇದೀಗ ಗೌರವ ಡಾಕ್ಟರೇಟ್‌ವರೆಗೂ ತಂದು ನಿಲ್ಲಿಸಿದ್ದೀರಿ..!

ಚಿತ್ರ ನಟ ರಮೇಶ್ ಅರವಿಂದ್ ಅವರು ತಮ್ಮ ಅಭಿಮಾನಿಗಳು, ಸಿನಿಪ್ರೇಕ್ಷಕರಿಗೆ ಹೇಳಿದ್ದು ಹೀಗೆ. ಗೌರವ ಡಾಕ್ಟರೇಟ್ ದೊರೆತ ಹಿನ್ನೆಲೆಯಲ್ಲಿ ನಗರದಲ್ಲಿ ಶಿವಾಜಿ ಸುರತ್ಕಲ್-2 ಚಿತ್ರ ತಂಡದಿಂದ ಗುರುವಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಚಲನಚಿತ್ರರಂಗ ನನಗೆ ಎಲ್ಲವನ್ನೂ ನೀಡಿದೆ. ಕುಟುಂಬದ ಸಹಕಾರ ಮತ್ತು ಜನರ ಪ್ರೋತ್ಸಾಹದಿಂದಾಗಿ 30 ವರ್ಷಗಳವರೆಗೆ ಸಾಗಿ ಬಂದಿರುವೆ ಎಂದು ಸಂತೋಷದಿಂದ ಹೇಳಿದರು.

ತಮ್ಮ ಸಿನಿಮಾ ಕುರಿತು ಮಾತನಾಡಿದ ಅವರು, ಶಿವಾಜಿ ಸುರತ್ಕಲ್-1 ರೆಸಾರ್ಟ್‌ನಲ್ಲಿ ನಡೆದಿತ್ತು. ಆದರೆ, ಶಿವಾಜಿ ಸುರತ್ಕಲ್-2 ಸುರತ್ಕಲ್, ಉಡುಪಿ, ಶಿವಮೊಗ್ಗ, ಮಂಗಳೂರು ಇನ್ನಿತರ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಸಲ ಕೇಸ್ ನಂ.131 ಪರಿಹರಿಸುವ ಕಥೆ ಇರಲಿದೆ ಎಂದರು.
ನಟ ನಾಸರ್ ಮಾತನಾಡಿ, ರಮೇಶ್ ಅವರೊಂದಿಗೆ ಕೆಲಸ ಮಾಡುವುದು ಒಳ್ಳೆಯ ಅನುಭವ ನೀಡುತ್ತದೆ. ಕಲಾವಿದರಲ್ಲಿರುವ ಪ್ರತಿಭೆಯನ್ನೆಲ್ಲ ಬಳಸಿಕೊಳ್ಳುವಲ್ಲಿ ಸಿದ್ಧಹಸ್ತರು ಎಂದು ಹೇಳಿದರು.

ನಾನು ರಾವಣ ರಾಜ್ಯ ಸಿನಿಮಾದ ಮೂಲಕ ಕರ್ನಾಟಕದಲ್ಲೇ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದೆ ಎಂದರು.
ನಟಿ ರಾಧಿಕಾ ಮಾತನಾಡಿ, ಈ ಚಿತ್ರದಲ್ಲಿ ಮೈಸೂರು ಕೂಡ ಒಂದು ಪಾತ್ರವಾಗಿರಲಿದೆ. ಟೀಸರ್‌ಗೆ ಉತ್ತಮ ಸ್ಪಂದನೆ ದೊರೆತಿದೆ ಎಂದರು

ನಿರ್ದೇಶಕ ಆಕಾಶ್ ಶ್ರೀವತ್ಸ ಮಾತನಾಡಿ, ಈ ಚಿತ್ರ ಜ.23ರಂದು ಬಿಡುಗಡೆಯಾಗಲಿದೆ. ಶಿವಾಜಿ ಸುರತ್ಕಲ್-1ರಲ್ಲಿ ಮೈಸೂರನ್ನು ಸೊಗಸಾಗಿ ತೋರಿಸಿದ್ದೀರಿ ಎಂದು ಪ್ರೇಕ್ಷಕರು ಹೇಳಿದ್ದರು. ಹೀಗಾಗಿ, ಶಿವಾಜಿ ಸುರತ್ಕಲ್2 ಚಿತ್ರೀಕರಣವನ್ನೂ ಇಲ್ಲಿ ನಡೆಸಲಾಗಿದೆ. ಚಿತ್ರ ಉತ್ತಮವಾಗಿ ಮೂಡಿ ಬರುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net