

ವಿಜಯಪುರ: ಸನಾತನ ಧರ್ಮದ ವಿರುದ್ಧ ಮಾತನಾಡುವವರು ನಾಶವಾಗಿ ಹೋಗುತ್ತಾರೆ. ಸನಾತನ ಧರ್ಮ ನಾಶ ಮಾಡಬೇಕು ಎನ್ನುವವರು ಕ್ಯಾನ್ಸರ್, ಏಡ್ಸ್ ಇದ್ದ ಹಾಗೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದರು.
ವಿಜಯಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸನಾತನ ಧರ್ಮದ ಪರವಾಗಿ ಆದಿಚುಂಚನಗಿರಿ ಸ್ವಾಮಿ, ಮೂರು ಸಾವಿರ ಮಠದ ಗುರುಗಳು ಮಾತನಾಡಿದ್ದಾರೆ. ಉಳಿದವರು ಮಾತನಾಡಿಲ್ಲ, ಧ್ವನಿ ಎತ್ತಬೇಕು. ಸ್ವಾಮೀಜಿಗಳಲ್ಲಿ ಕೆಲವರು ಕಪಟರು ಇದ್ದಾರೆ. ಹಿಂದು ಧರ್ಮದ ಬಗ್ಗೆ ಎಲ್ಲ ಸ್ವಾಮೀಜಿಗಳು ಧ್ವನಿ ಎತ್ತಬೇಕು ಎಂದರು.
ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ ಬಹಿರಂಗವಾಗಿ ತಮ್ಮ ಪಕ್ಷದ ನಾಯಕರನ್ನು ಕೆಣಕುತ್ತಿದ್ದಾರೆ. ಅವರ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಧಮ್ ಇದ್ದರೆ, ಕ್ರಮ ಕೈಗೊಳ್ಳಲಿ ಎಂದು ಲೇವಡಿ ಮಾಡಿದರು.
ಬಿ.ಕೆ.ಹರಿಪ್ರಸಾದ ಕಾಂಗ್ರೆಸ್ ಮುಖಂಡರು ತಾನೇ. ತಾಕತ್ತು ಇದ್ದರೆ ಪಕ್ಷದಿಂದ ಡಿಕೆಶಿ ಉಚ್ಚಾಟನೆ ಮಾಡಲಿ ನೋಡೋಣ ಎಂದರು.
ಸಚಿವ ಡಿ.ಸುಧಾಕರ ಅವರು ದಲಿತರ ಜಾತಿ ನಿಂದನೆ ಹಾಗೂ ದೌರ್ಜನ್ಯ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಕೂಡಲೇ ಅವರನ್ನು ಸಂಪುಟದಿಂದ ಕೈ ಬಿಡಬೇಕು, ಇಲ್ಲವಾದರೂ ಸಿಎಂ ಸಿದ್ದರಾಮಯ್ಯ ಅವರನು ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಉದಯನಿಧಿ ವಿಷದ ಹಾವು: ತಮಿಳುನಾಡು ಮಾಜಿ ಸಿಎಂ ದಿ. ಕರುಣಾನಿಧಿ ಕುಟುಂಬದ ತಳಿಯೇ ವಿಷದ ಹಾವು ಇದ್ದ ಹಾಗೆ. ಕೆಟ್ಟ ತಳಿ ಇದೆ. , ಈ ತಳಿ ದೇಶಕ್ಕೆ ನಿಷ್ಠೆ ಇಲ್ಲ, ಧರ್ಮಕ್ಕೆ ನಿಷ್ಠೆ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದರು.
ಈ ಹಿಂದೆ ಎಲ್‌ಟಿಟಿಐ ಸಂಘಟನೆಗೆ ಸಪೋರ್ಟ್ ಮಾಡಿದವರು, ಅವರಿಂದ ಏನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.
ಇದೇ ವೇಳೆ ಚಲನಚಿತ್ರ ನಟ ಪ್ರಕಾಶ ರೈ ವಿರುದ್ಧವೋ ಸಹ ವಾಗ್ದಾಳ ನಡೆಸಿದ ಯತ್ನಾಳ, ಪ್ರಕಾಶ ರೈ ಅವರನ್ನು ಹಂದಿಗೆ ಹೋಲಿಸಿ ಮಾತನಾಡಿದರು. ಸನಾತನ ದರ್ಮ ಕಾಗೆ ಎಂದು ಹೇಳುತ್ತಾರೆ. ಆದರೆ ಅವರೇ ಹಂದಿ ಇದ್ದ ಹಾಗೆ. ನಮ್ಮ ರಾಜ್ಯದವ ಎನ್ನುವುದಕ್ಕೆ ನಾಚಿಕೆಯಾಗುತ್ತದೆ. ಸ್ವಚ್ಚ ಮಾಡಲು ಹಂದಿ ಇರುತ್ತದೆ. ಹಾಗೆ ಪ್ರಕಾಶ ರೈ ಎನ್ನುವ ವ್ಯಕ್ತಿ ಆ ಕೆಲಸ ಮಾಡುತ್ತಿದ್ದಾರೆ ಎಂದರು.
ಮತ್ತೆ ಪಂಚಮಸಾಲಿ ಹೋರಾಟ: ಪಂಚಮಸಾಲಿ ಮೀಸಲಾತಿ ನಡೆಸಿದ ಹೋರಾಟದಿಂದ ಒಂದು ಹಂತಕ್ಕೆ ತಲುಪಿದ್ದೇವೆ. ಇನ್ನೇನಿದ್ದರೂ ವಿಜಯಾನಂದ ಕಾಶಪ್ಪವರ, ಲಕ್ಷ್ಮೀ ಹೆಬ್ಬಾಳಕರ ಹಾಗೂ ವಿನಯ ಕುಲಕರ್ಣಿ ಇದ್ದಾರೆ. ಅವರದ್ದೆ ಸರ್ಕಾರ ಇರುವ ಕಾರಣ ಮುಂದೆ ಏನಾದರೂ ಆಗಬೇಕಾದರೆ ಅವರನ್ನೇ ಕೇಳಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಈಗಾಗಲೇ ಏನಾ ಹೋರಾಟ ಮಾಡಬೇಕು ಅದನ್ನು ಮಾಡಿಬಿಟ್ಟಿದ್ದೇವೆ. ಸುಮ್ಮಸುಮ್ಮನೆ ಭಾಗವಹಿಸಲು ನಮಗೆ ಕೆಲಸ ಇಲ್ಲವಾ?. ನಮ್ಮ ಸರ್ಕಾರವಿದ್ದಾಗ ನೋಟಿಕೇಷನ್ ಮಾಡಿದ್ದೇವಿ, ರಾಜ್ಯಪಾಲರ ಸುಗ್ರೀವಾಜ್ಞೆ ಆಗಿಬಿಟ್ಟಿದೆ. ಈಗ ಅದನ್ನುಸಮರ್ಪಕವಾಗಿ ಜಾರಿಗೊಳಿಸುವುದು ಕಾಂಗ್ರೆಸ ಸರ್ಕಾರದ ಕೆಲಸವಾಗಿದೆ ಎಂದರು.