ಚಲಗೇರಾದಲ್ಲಿ ರೈತರ ಮೇಲೆ ತೋಳ ದಾಳಿ

2102Klb22
Published on

ಆಳಂದ: ಚಲಗೇರಾ ಗ್ರಾಮದಲ್ಲಿ ತೋಳ ದಾಳಿ ಮಾಡಿದ್ದರಿಂದ ಎಂಟು ರೈತರು ಗಾಯಗೊಂಡ ಘಟನೆ ಬುಧವಾರ ನಡೆದಿದೆ. ಘಟನೆಯಲ್ಲಿ ಓರ್ವ ರೈತನಿಗೆ ಗಂಭೀರಗಾಯಗಳಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಶರಣಪ್ಪ ಜಮಾದಾರ, ಅನಸುಬಾಯಿ ಮುಗಳಿ, ನೀಲಪ್ಪ ಹಾಲೋಳ್ಳಿ, ಮಲ್ಲಪ್ಪ ಜಮಾದಾರ, ಸುನೀಲ್ ಮೂಲಗೆ, ಶರಣಪ್ಪ ದಿಂಡೂರೆ ಅವರಿಗೆ ಗಾಯಗಳಾಗಿದ್ದು, ಶರಣಪ್ಪ ಧಲ್ಲು ಅವರಿಗೆ ಗಂಭೀರ ಗಾಯಗಳಾಗಿವೆ. ಗ್ರಾಮದಲ್ಲಿನ ನಾಯಿಗಳನ್ನು ಕಚ್ಚಿದ್ದು, ಒಂದು ಮೃತಪಟ್ಟಿದ್ದು, ಮತ್ತೊಂದು ನಾಯಿ ಹುಚ್ಚು ಹಿಡಿದಂತೆ ವರ್ತಿಸುತ್ತಿದೆ. ಪಶು ವೈದ್ಯರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net