ಚರ್ಮರೋಗ ಚಿಕಿತ್ಸೆಯಲ್ಲಾಗಿದೆ ಸಾಕಷ್ಟು ಆವಿಷ್ಕಾರ

CTD CUTICON ....
Published on

ಚಿತ್ರದುರ್ಗ: ಚರ್ಮರೋಗಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಂಶೋಧನೆಗಳಾಗಿವೆ ಎಂದು ಭಾರತೀಯ ಚರ್ಮ ರೋಗ ತಜ್ಞರ ಸಂಘದ(ಐಎಡಿವಿ ಎಲ್)ಅಧ್ಯಕ್ಷ ಡಾ.ಮಂಜುನಾಥ ಶೆಣೈ ಹೇಳಿದರು.

ಐಎವಿಡಿಎಲ್ ಕರ್ನಾಟಕ ಶಾಖೆ ಆಶ್ರಯದಲ್ಲಿ ನಗರದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ‘ಕುಟಿಕಾನ್ ಕೆಎನ್-24’ಚರ್ಮರೋಗ ತಜ್ಷರ ರಾಜ್ಯಮಟ್ಟದ ಮೂರು ದಿನದ ಸಮ್ಮೇಳನ ಉದ್ಘಾಟಿಸಿ ಮಾತನಾಡಿ,ಚರ್ಮರೋಗ ಚಿ ಕಿತ್ಸೆಗೆ ಸಂಬಂಧಿಸಿದಂತೆ ಸಾಕಷ್ಟು ಆವಿಷ್ಕಾರ,ಸುಧಾರಣೆಗಳಾಗಿವೆ.

ಐಎಡಿವಿಎಲ್ ಅಧ್ಯಕ್ಷನಾಗಿರುವುದಕ್ಕೆ ಹೆಮ್ಮೆ ಇದೆ. ಐಎಡಿವಿಎಲ್ ಕರ್ನಾಟಕ ಶಾಖೆ ಕೂಡ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದು,ಚ ರ್ಮರೋಗಕ್ಕೆ ಸಂಬಂಧಿಸಿದಂತೆ ಉತ್ತಮ ಸಂಶೋಧನಾ ಲೇಖನಗಳನ್ನು ಪ್ರಕಟಿಸುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸಂಖ್ಯಾಆಧರಿಸಿ ಐಎಡಿ ವಿಎಲ್ ಪ್ರಪಂಚದಲ್ಲಿ ಎರಡನೇ ದೊಡ್ಡ ಸಂಘಟನೆಯಾಗಿದೆ. ಶೈಕ್ಷಣಿಕ ಬೆಳವಣಿಗೆಗೆ ನಮ್ಮ ಕೊಡುಗೆ ಹಿರಿದಾಗಿದೆ ಎಂದರು.

ಐಎವಿಡಿಎಲ್ ಕರ್ನಾಟಕ ಶಾಖೆ ಅಧ್ಯಕ್ಷೆ ಡಾ.ಮಿತಾಕ್ಷರಿ ಎಂ.ಹೂಗಾರ್‌ಮಾತನಾಡಿ,ತಪ್ಪು ಮಾಹಿತಿ ಮತ್ತು ಹಲವು ಅನರ್ಹ ವ್ಯಕ್ತಿಗ ಳಿಂದಾಗಿ ವೈದ್ಯರಿಂದು ಹಲವು ಸವಾಲುಗಳನ್ನು ಎದುರಿಸುವಂತಾಗಿದೆ. ನಮ್ಮ ಶಾಖೆಯಿಂದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಶಾಲೆಗಳಲ್ಲೂ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ. ಸಮ್ಮೇಳನದಲ್ಲಿ ಉತ್ತಮ ಚರ್ಮರೋಗ ತಜ್ಞರು ಭಾಗವಹಿ ಸಿದ್ದಾರೆ. ಉತ್ತಮ ಪ್ರಬಂಧಗಳು ಮಂಡನೆಯಾಗಲಿದ್ದು,ಸಮ್ಮೇಳನದ ಸದುಪಯೋಗ ಪಡೆದುಕೊಳ್ಳಬೇಕೆಂದ ಅವರು, ಇತಿಹಾಸ ಪ್ರಸಿದ್ಧ ಚಿತ್ರದುರ್ಗದಲ್ಲಿ ಏರ್ಪಡಿಸಿರುವ ಈ ಸಮ್ಮೇಳನ ಯಶಸ್ವಿಯಾಗಲಿದೆ ಎಂದ ಅವರು, ಕೋಟೆ ರಕ್ಷಿಸುವ ಮೂಲಕ ದಂತ ಕಥೆಯಾಗಿರು ವ ಒನಕೆ ಓಬವ್ವ ಹಾಗೂ ಚಿತ್ರದುರ್ಗದ ಇತಿಹಾಸವನ್ನು ಸ್ಮರಿಸಿದರು.

ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಪಿ.ಎಸ್.ಶಂಕರ್ ಮಾತನಾಡಿ,ಬದಲಾದ ಹವಾಮಾನ ಅನೇಕ ರೀತಿಯ ಚರ್ಮರೋಗಗಳಿಗೆ ಕಾರಣವಾಗುತ್ತದೆ. ಅದಕ್ಕೆ ಸೂಕ್ತ ಚಿಕಿತ್ಸೆ ಕೊಡುವಂಥ ಶಕ್ತಿ ವೈದ್ಯಕೀಯ ಕ್ಷೇತ್ರಕ್ಕೆ ಇದೆ ಎಂದರು. ಐಎಡಿವಿಎಲ್ ರಾ ಜ್ಯಪ್ರಶಸ್ತಿಯನ್ನು ಡಾ.ಜಯದೇವ ಬೆಟ್ಕರೂರ್ ಹಾಗೂ ಡಾ.ಶಿಲ್ಪಾ ಅವರಿಗೆ ಉತ್ತಮ ವೈದ್ಯೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.

ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ.ಎಸ್.ಆನಂದಪ್ಪ, ಬಸವೇಶ್ವರ ಕಾಲೇಜಿನ ಡೀನ್ ಡಾ.ಜಿ.ಪ್ರಶಾಂತ್,ಡಾ.ಮಂಜುನಾಥ ಹುಲಮನೆ, ಡಾ.ಸಿ.ಮಹೇಶ ಕು ಮಾರ್ ಮತ್ತಿತರರು ಇದ್ದರು. ಡಾ.ಎಂ.ಯೋಗೇಂದ್ರ ಸ್ವಾಗತಿಸಿ,ಡಾ.ಎಂ.ಟಿ.ರಘು ವಂದಿಸಿದರು. ಎಸ್.ಎಚ್.ವರ್ಷಿಣಿ ಪ್ರಾರ್ಥಿಸಿ ದರು. ಎಂ.ಅಮೃತಾ ಮತ್ತು ಎಂ.ಅಶ್ವಿನಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net