ಚರ್ಮಗಂಟು ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡಿ

25.33
ಕಾಯಂ ಪಶು ವೈದ್ಯರನ್ನು ನೇಮಿಸುವಂತೆ ಆಗ್ರಹಿಸಿ ಐನಾಪುರ ಪಟ್ಟಣದಲ್ಲಿ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಯಿತು. ಅರುಣ ಗಾಣಿಗೇರ, ಪ್ರಕಾಶ ಕೋರ್ಬು, ರಾಜು ಮದನೆ, ಗಜಾನನ ಯರಂಡೊಲಿ, ಸುರೇಶ ಅಡಿಸೇರಿ, ಸುರೇಶ ಗಾಣಿಗೇರ ಇತರರಿದ್ದರು.
Published on

ಐನಾಪುರ, ಬೆಳಗಾವಿ: ಜಾನುವಾರುಗಳು ಚರ್ಮ ಗಂಟು ರೋಗಕ್ಕೆ ಸೂಕ್ತ ಚಿಕಿತ್ಸೆ ಇಲ್ಲದೆ ಸಾವನ್ನಪ್ಪುತ್ತಿದ್ದು, ಇದಕ್ಕೆ ಶಾಸಕರೇ ಕಾರಣ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ಅರುಣ ಗಾಣಿಗೇರ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಗುರುವಾರ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾಗವಾಡ ತಾಲೂಕಿನಲ್ಲಿ 8 ಪಶು ಆಸ್ಪತ್ರೆಗಳಿದ್ದರೂ ಐನಾಪುರ ಹೊರತುಪಡಿಸಿ ಬೇರೆ ಎಲ್ಲೂ ಅಗತ್ಯ ವೈದ್ಯರಿಲ್ಲ. ಆದಷ್ಟು ಬೇಗ ಕಾಯಂ ವೈದ್ಯರನ್ನು ನೇಮಿಸಬೇಕು ಇಲ್ಲದಿದ್ದರೆ ಮೃತ ಜಾನುವಾರುಗಳನ್ನಿಟ್ಟು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಚರ್ಮಗಂಟು ರೋಗದಿಂದ ಸಾಯುತ್ತಿರುವ ಜಾನುವಾರುಗಳಿಗೆ ಸರ್ಕಾರದಿಂದ ನೀಡುತ್ತಿರುವ ಪರಿಹಾರವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಪ್ರಕಾಶ ಕೋರ್ಬು, ರಾಜು ಮದನೆ, ಗಜಾನನ ಯರಂಡೊಲಿ, ಸುರೇಶ ಅಡಿಸೇರಿ, ಸುರೇಶ ಗಾಣಿಗೇರ, ಸಂಜೀವ ಕುಸನಾಳೆ, ಸಂದೀಪ ರಡ್ಡಿ, ಅನುಪ ಶೆಟ್ಟಿ, ಸತೀಶ ಗಾಣಿಗೇರ, ಯಶವಂತ ಪಾಟೀಲ, ರಾವಸಾಬ ಪಾಟೀಲ, ಅಪ್ಪಾಸಾಬ ಪಾಟೀಲ, ರಾಮಾ ಮಾನೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net