ಚರ್ಮಗಂಟು ರೋಗಕ್ಕೆ ಔಷಧ ವಿತರಣೆ

11-1
ಶೇಡಬಾಳದಲ್ಲಿ ದೇಸಿ ಗೋವು ಅಮೃತ ಸಂಘದಿಂದ ಚರ್ಮಗಂಟು ರೋಗಕ್ಕೆ ಆಯುರ್ವೇದಿಕ್ ಉಚಿತ ಔಷಧವನ್ನು ಯುವ ಮುಖಂಡ ಶ್ರೀನಿವಾಸ ಪಾಟೀಲ ವಿತರಿಸಿದರು. ಭರತೇಶ ಪಾಟೀಲ, ಕಿರಣ ಯಂದಗೌಡರ, ಅಶ್ವತ್ಥ ಪಾಟೀಲ, ಶೀತಲ ಪಾಟೀಲ, ಅಮಿತ ಪಾಟೀಲ ಇತರರಿದ್ದರು.
Published on

ಕಾಗವಾಡ, ಬೆಳಗಾವಿ: ಜಾನುವಾರುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಚರ್ಮಗಂಟು ರೋಗಕ್ಕೆ ದೇಸಿ ಗೋವು ಅಮೃತ ಸಂಘದ ಯುವಕರು ಉಚಿತವಾಗಿ ಆಯುರ್ವೇದಿಕ್ ಔಷಧ ವಿತರಿಸುತ್ತಿರುವುದು ಶ್ಲಾಘನೀಯ ಎಂದು ಕೆಂಪವಾಡ ಅಥಣಿ ಶುಗರ್ಸ್‌ ನಿರ್ದೇಶಕ ಶ್ರೀನಿವಾಸ ಪಾಟೀಲ ಹೇಳಿದರು.

ಸಮೀಪದ ಶೇಡಬಾಳ ಪಟ್ಟಣದ ಅನಂತ ಎಂಟರ್‌ಪ್ರೈಸಸ್ ಆಶ್ರಯದಲ್ಲಿ ದೇಸಿ ಗೋವು ಅಮೃತ ಸಂಘದಿಂದ ಚರ್ಮಗಂಟು ರೋಗಕ್ಕೆ ಉಚಿತ ಔಷಧ ವಿತರಿಸುವ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಭಾಗದಲ್ಲಿ ವಿಪರೀತವಾಗಿ ಹಬ್ಬುತ್ತಿರುವ ಚರ್ಮಗಂಟು ರೋಗಕ್ಕೆ ಆಯುರ್ವೇದಿಕ್ ಔಷಧ ವಿತರಣೆ ರೈತರಿಗೆ ವರದಾನವಾಗಿದೆ. ಈ ಸಾಮಾಜಿಕ ಕಾರ್ಯಕ್ಕೆ ಶ್ರೀಮಂತ ಪಾಟೀಲ ಫೌಂಡೇಷನ್ ವತಿಯಿಂದ ಸಹಾಯ ನೀಡಲು ತಾವು ಸದಾ ಸಿದ್ಧ ಎಂದರು.

ಔಷಧಕ್ಕಾಗಿ ಅಮಿತ ಪಾಟೀಲ ಮೊ: 9108077679ಗೆ ಸಂಪರ್ಕಿಸಬಹುದಾಗಿದೆ. ಭರತೇಶ ಪಾಟೀಲ, ಕಿರಣ ಯಂದಗೌಡರ, ಅಶ್ವತ್ಥ ಪಾಟೀಲ, ಶೀತಲ ಪಾಟೀಲ, ಅಮಿತ ಪಾಟೀಲ, ಶೀತಲ ಈರಾಜ, ವಿನೋದ ನಾನಾಗೌಡರ, ಶೀತಲ ಗಣೆ, ಅರುಣ ಯಂದಗೌಡರ, ಪ್ರಮೋದ ಯಂದಗೌಡರ, ಶುಭಂ ಪಾಟೀಲ, ಚೇತನ ಮಾಳಿ, ನೇಮಗೌಡ ಪಾಲಗೌಡರ, ಸಚಿನ ಜಗತಾಪ, ಉತ್ಕರ್ಷ ಪಾಟೀಲ, ಸುಧರ್ಮ ಪಾಲಗೌಡರ, ಪ್ರಕಾಶ ಮಾಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net