ಚರ್ಮಗಂಟು ರೋಗ ನಿವಾರಣೆ ದೇವಿ ಮೊರೆ; ಬರಗಿ ಗ್ರಾಮಸ್ಥರಿಂದ ಗ್ರಾಮದ ಅಧಿದೇವತೆ ಮಾರಿಕಾಂಬೆಗೆ ಪೂಜೆ, ಹರಕೆ

WEB SORRRRR
Published on

ಸೊರಬ: ಚರ್ಮಗಂಟು ರೋಗದಿಂದ ನಮ್ಮ ಜಾನುವಾರುಗಳ ರಕ್ಷಿಸು ಎಂದು ತಾಲೂಕಿನ ಬರಗಿ ಗ್ರಾಮಸ್ಥರು ಮಂಗಳವಾರ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಹರಕೆ ಕಟ್ಟಿದ್ದಾರೆ.

ತಾಲೂಕಿನಲ್ಲಿ ಜಾನುವಾರಗಳು ಚರ್ಮಗಂಟು ರೋಗದಿಂದ ತೀವ್ರವಾಗಿ ಬಳಲುತ್ತಿದ್ದು, ಸಾವಿನ ಸಂಖ್ಯೆ ದಿನೇ ದಿನೆ ಏರಿಕೆ ಆಗುತ್ತಿದೆ. ಪ್ರತಿ ಗ್ರಾಮಗಳಿಗೂ ರೋಗ ಹರಡುತ್ತಿದೆ. ಸರ್ಕಾರ ನೀಡುತ್ತಿರುವ ಇಂಗ್ಲಿಷ್ ಔಷಧ, ಗಿಡಮೂಲಿಕೆಗಳಿಗೂ ಕಡಿಮೆ ಆಗುತ್ತಿಲ್ಲ. ನೀವೆ ನಮ್ಮನ್ನು ಕಾಪಾಡಬೇಕೆಂದು ಗ್ರಾಮದ ರೈತರು ದೇವಿಯ ಮೊರೆ ಹೋಗಿದ್ದಾರೆ.

ಗ್ರಾಮಸ್ಥರೆಲ್ಲರೂ ಒಗ್ಗೂಡಿ ಹಬ್ಬದ ರೀತಿ ಧಾರ್ಮಿಕ ಕೈಂಕರ್ಯಗಳ ಕೈಗೊಂಡು, ಗ್ರಾಮದ ಅಧಿದೇವತೆ ಮಾರಿಕಾಂಬಾ ದೇವಿಗೆ ವಿಷೇಶ ಪೂಜೆ ಸಲ್ಲಿಸಿದರು. ರೋಗ ಪಸರಿಸದಿರಲಿ, ಕಾಯಿಲೆ ಬಂದ ಜನುವಾರುಗಳು ಬೇಗ ಚೇತರಿಸಿಕೊಂಡು ಗುಣಮುಖವಾಗಲಿ, ಸಾವು-ನೋವು ಆಗದಿರಲಿ ಎಂದು ಹಸಿರು ಬಟ್ಟೆಯಲ್ಲಿ ಗಂಟು ಕಟ್ಟಿ ಹರಕೆ ಮಾಡಿಕೊಂಡರು. ಗ್ರಾಮದ ಒಳಗೆ ರೋಗ ಬರದಿರಲಿ, ನಮ್ಮ ಜಾನುವರುಗಳನ್ನು ರಕ್ಷಿಸು ಎಂದು ವಿಶೇಷ ಪೂಜೆ ಸಲ್ಲಿಸಿ ದೇವಿಯನ್ನು ಪ್ರಾರ್ಥಿಸಿದರು.

ಸಾಗರದ ಪುರೋಹಿತ ರಾಜುಭಟ್, ದೇವಾಸ್ಥಾನ ಅರ್ಚಕ ದೊಡ್ಡ ಹುಚ್ಚಪ್ಪ ಪೂಜಾ ಕೈಂಕರ್ಯ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net