

ಶಿರಹಟ್ಟಿ: ಚರ್ಮಗಂಟು ರೋಗದಿಂದಾಗಿ ಮಂಗಳವಾರ ಒಂದು ಎತ್ತು ಮತ್ತು ನಾಲ್ಕು ಕುರಿಗಳು ಮೃತಪಟ್ಟಿದ್ದರಿಂದ ಆಕ್ರೋಶಗೊಂಡ ತಾಲೂಕಿನ ಸುಗ್ನಳ್ಳಿ ಗ್ರಾಮದ ರೈತರು ಸೂಕ್ತ ಪರಿಹಾರ ನೀಡಬೇಕು ಎಂದ ಆಗ್ರಹಿಸಿ ಕಳೇಬರವನ್ನು ಚಕ್ಕಡಿಯಲ್ಲಿಟ್ಟು ಕೆಲಕಾಲ ರಸ್ತೆ ಸಂಚಾರ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.
ಗ್ರಾಪಂ ಅಧ್ಯಕ್ಷ ಸಿದ್ದಲಿಂಗಯ್ಯ ಹೊಂಬಾಳಿಮಠ ಮಾತನಾಡಿ, ದನ-ಕರು ಹಾಗೂ ಕುರಿಗಳಿಗೆ ಚರ್ಮಗಂಟು ರೋಗ ಆವರಿಸಿದ್ದರಿಂದ ಅವುಗಳಲ್ಲಿನ ಶಕ್ತಿ ಕುಂದುವಂತೆ ಮಾಡುತ್ತಿದೆ. ಚಿಕಿತ್ಸೆ ಫಲಕಾರಿಯಾಗದ ಕಾರಣ ರೋಗ ಉಲ್ಬಣಗೊಂಡು ಅವುಗಳ ಪ್ರಾಣಕ್ಕೆ ಸಂಚಕಾರ ಬರುತ್ತಿದೆ. ತಾಲೂಕು ಆಡಳಿತ ಸಕಾಲಕ್ಕೆ ಸಮರ್ಪಕವಾಗಿ ಔಷಧೋಪಚಾರ ನೀಡದ ಕಾರಣ ರೈತರಿಗೆ ದಿಕ್ಕು ತೋಚದಂತಾಗಿದೆ. ರೈತರ ಬಾಳಿಗೆ ಆಸರೆಯಾದ ಲಕ್ಷಾಂತರ ರೂ. ಬೆಳೆ ಬಾಳುವ ಎತ್ತುಗಳು, ಸಾವಿರಾರು ರೂ. ಕಿಮ್ಮತ್ತಿನ ಕುರಿಗಳು ಅಸುನೀಗುತ್ತಿರುವುದರಿಂದ ರೈತರು ತೀವ್ರ ತೊಂದರೆ ಅನá-ಭವಿಸá-ವಂತಾಗಿದೆ. ಜಿಲ್ಲಾಡಳಿತ ಕೂಡಲೇ ರೋಗಕ್ಕೆ ಅಗತ್ಯ ಚುಚ್ಚುಮದ್ದು, ಔಷಧೋಪಚಾರ ಒದಗಿಸಬೇಕು. ಅಲ್ಲದೆ, ಸತ್ತ ಎತ್ತು, ಕುರಿಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಕೆ.ಆರ್. ಪಾಟೀಲ, ಶಿರಹಟ್ಟಿ ಮುಖ್ಯ ಪಶು ವೈದ್ಯಾಧಿಕಾರಿ ಡಿ.ಬಿ. ಹಕ್ಕಾಪಕ್ಕಿ ಮಾತನಾಡಿ, ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಏಕಾಏಕಿ ಕಂಡು ಬಂದಿದ್ದರಿಂದ ರೋಗ ಹತೋಟಿಗೆ ಬೇಕಾದ ಅಗತ್ಯ ಚುಚ್ಚುಮದ್ದು ಲಭ್ಯವಿರದ ಕಾರಣ ಅದನ್ನು ನಿಯಂತ್ರಿಸುವ ಶಕ್ತಿ ಹೊಂದಿದ ಗೋಟ್ ಫಾಕ್ಸ್ ಎಂಬ ಚುಚ್ಚುಮದ್ದು ನೀಡಲಾಗುತ್ತಿದೆ. ಅದು ಪರಿಣಾಮ ಬೀರಲು ಕನಿಷ್ಠ 3 ಗಂಟೆ ಕಾಲಾವಕಾಶ ಬೇಕು. ಆದರೆ, ಕೆಲ ಜಾನುವಾರುಗಳಲ್ಲಿ ರೋಗದ ತೀವ್ರತೆ ಹೆಚ್ಚಾದಾಗ ಔಷಧ ಕೆಲಸ ಮಾಡದಿದ್ದಾಗ ಅವುಗಳ ಪ್ರಾಣಕ್ಕೆ ಸಂಚು ಬರುವಂತಾಗಿದೆ. ಈ ಗಂಭೀರತೆ ಬಗ್ಗೆ ಈಗಾಗಲೇ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಂದೇಶ ನೀಡಲಾಗಿದೆ. ಈ ಬಗ್ಗೆ ನಾವು ನಿಸ್ಸಹಾಯಕರಾಗಿದ್ದು, ಕೈಲಾದ ಮಟ್ಟಿಗೆ ಚಿಕಿತ್ಸೆ ನೀಡಿ ಜಾನುವಾರá-ಗಳನ್ನು ಬದá-ಕಿಸಲು ಕಾರ್ಯೋನ್ಮುಖರಾಗಿದ್ದೇವೆ. ಪರಿಹಾರಕ್ಕೆ ಸಂಬಂಧಪಟ್ಟಂತೆ ಕೂಡಲೇ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗá-ತ್ತದೆ ಎಂದು ಭರವಸೆ ನೀಡಿದರು.
3 ಗಂಟೆಗೂ ಹೆಚ್ಚು ಕಾಲ ರೈತರು ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದರಿಂದ ಬೆಳ್ಳಟ್ಟಿ, ಮುಂಡರಗಿ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ, ವಾಹನ ಸವಾರರು ಹಾಗೂ ಪ್ರಯಾಣಿಕರು ತೊಂದರೆ ಅನá-ಭವಿಸá-ವಂತಾಯಿತು. ಮಹಾಂತಗೌಡ ಪಾಟೀಲ, ಯಲ್ಲನಗೌಡ ಪಾಟೀಲ, ಹನುಂತಪ್ಪ ಕಲ್ಲೂರ, ಅಡಿವೆಪ್ಪ ಆಡಿನ, ಮಲ್ಲಿಕಾರ್ಜುನ ಬಳ್ಳೊಳ್ಳಿ ಇತರರಿದ್ದರು.