ಚರ್ಚಾ ಸ್ಪರ್ಧೆಯಲ್ಲಿ ಎಚ್‌ಕೆಎಸ್‌ನ ವಿದ್ಯಾರ್ಥಿಗಳ ಅದ್ಬುತ ಸಾಧನೆ.

ಚರ್ಚಾ ಸ್ಪರ್ಧೆಯಲ್ಲಿ ಎಚ್‌ಕೆಎಸ್‌ನ ವಿದ್ಯಾರ್ಥಿಗಳ ಅದ್ಬುತ ಸಾಧನೆ.
Published on

ಹಾಸನ: ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವದ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಎಚ್.ಕೆ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಸಹಕಾರ ಚಳುವಳಿಯ ಸಾಧನೆ ಕುರಿತಂತೆ ಜನರಲ್ಲಿ ಅರಿವು ಮೂಡಿಸುವ ಮತ್ತು ಚಳುವಳಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಾಸನ ಜಿಲ್ಲಾ ಸಹಕಾರ ಯೂನಿಯನ್ ಇವರ ವತಿಯಿಂದ ಜಿಲ್ಲೆಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.ಈ ಚರ್ಚಾ ಸ್ಪರ್ಧೆಯಲ್ಲಿ ಎಚ್.ಕೆ.ಎಸ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಿ.ವೈ.ಗೌತಮ್ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿನಿ ಎಲ್. ಅಕ್ಷರಾ ಅವರು ಪ್ರಥಮ ಬಹುಮಾನವನ್ನು ಪಡೆದು ಅದ್ಭುತ ಸಾಧನೆಗೈದಿದ್ದಾರೆ.ವಿಜೇತರನ್ನು ಕಾರ್ಯದರ್ಶಿ ಎಚ್.ಕೆ. ಸುರೇಶ್, ಕಾರ್ಯದರ್ಶಿ ಎಚ್. ಎಸ್.ಪ್ರಶಾಂತ್ ಗೌಡ, ಆಡಳಿತ ಮಂಡಳಿ , ಪ್ರಾಂಶುಪಾಲರು ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net